ಕೋಲಾರ: ಮಾನವೀಯತೆ ತಲೆತಗ್ಗಿಸುವಂತಹ ಭೀಕರ ಘಟನೆ ಶ್ರಿನಿವಾಸಪುರ ಪಟ್ಟಣದಲ್ಲಿ ನಡೆದಿದೆ. ದೇವರ ದರ್ಶನಕ್ಕಾಗಿ ಪಟ್ಟಣಕ್ಕೆ ಬಂದಿದ್ದ 80 ವರ್ಷದ ವೃದ್ಧೆಯೊಬ್ಬರ ಮೇಲೆ ದುರುಳನು ಅತ್ಯಾಚಾರ ಎಸಗಿ, ಬಳಿಕ ಹಣಕ್ಕಾಗಿ ಕೊಲೆ ಮಾಡಿದ ಘಟನೆ ಮಂಗಳವಾರ ಬೆಳಕಿಗೆ ಬಂದಿದೆ.
ಮೃತ ವೃದ್ಧೆ ಲಕ್ಷ್ಮೀದೇವಮ್ಮ (80), ಹೆಚ್.ಜಿ.ಹೊಸೂರು ಗ್ರಾಮದ ನಿವಾಸಿ ಎಂದು ತಿಳಿದು ಬಂದಿದೆ. ಶನಿವಾರದಿಂದ ಶ್ರೀನಿವಾಸಪುರ ಪಟ್ಟಣದಲ್ಲಿ ಚರ್ಚ್ ಮತ್ತು ದೇವಸ್ಥಾನಗಳಿಗೆ ಭೇಟಿ ನೀಡಿ, ಸೋಮವಾರ ಸಂಜೆ ಹಳ್ಳಿಗೆ ವಾಪಸ್ಸಾಗಲು ಬಸ್‌ಗಾಗಿ ಕಾಯುತ್ತಿದ್ದರು. ಈ ವೇಳೆ ಬಂದ ವ್ಯಕ್ತಿಯೊಬ್ಬ ಆಕೆಯನ್ನು ಶ್ರೀನಿವಾಸಪುರ ಪಟ್ಟಣದ ಮುಳಬಾಗಿಲು ರಸ್ತೆಯ ಸಂತೆ ಮೈದಾನದ ಬಳಿಯ ಗ್ಯಾರೇಜ್ ಬಳಿ ಹೊತ್ತೂಯ್ದು ಮೃಗದಂತೆ ವರ್ತಿಸಿ ಅತ್ಯಾಚಾರ ಮಾಡಿ ನಂತರ ಕುತ್ತಿಗೆ ಹಿಸುಕಿ ಕೊಲೆ ಮಾಡಿದ್ದಾನೆ. ನಂತರ ಆಕೆಯ ಬ್ಯಾಗ್ನಲ್ಲಿದ್ದ ಹದಿನೈದು ಸಾವಿರ ರೂ ಹಣ ದೋಚಿ ಪರಾರಿಯಾಗಿದ್ದಾನೆ. ಸ್ಥಳಕ್ಕೆ ಬಂದಿದ್ದ ಪೊಲೀಸರು ಅಲ್ಲೇ ಇದ್ದ ಅಂಗಡಿಯೊಂದರ ಸಿಸಿಟಿವಿ ಪರಿಶೀಲನೆ ಮಾಡಿದ್ದು, ದುರುಳನ ಕೃತ್ಯ ಬಯಲಾಗಿದೆ.
ಆರೋಪಿ ಸ್ವಲ್ಪ ಹೊತ್ತು ಬಿಟ್ಟು ಅಲ್ಲೇನಾಗಿದೆ ಎಂದು ನೋಡಲು ವಾಪಸ್ ಬಂದಿದ್ದ ಎನ್ನಲಾಗಿದೆ. ಈ ವೇಳೆ ಕಾರ್ಯ ಪ್ರವೃತ್ತರಾದ ಪೊಲೀಸರು ಆರೋಪಿ ಗಫರ್ಖಾನ್ ಮೊಹಲ್ಲಾದ ಮುನ್ನಿಸಾಬ್ ಎಂಬುವರ ಮಗ ಬಾಬ ಜಾನ್ ಅನ್ನೋದು ತಿಳಿದು ಬಂದಿದೆ. ಸದ್ಯ ಆತನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ಮಾಡಿದ್ದು, ಈ ವೇಳೆ ಆರೋಪಿ ವೃದ್ಧೆಯ ಮೇಲೆ ಅತ್ಯಾಚಾರ ಮಾಡಿ ಬಳಿಕ ಹದಿನೈದು ಸಾವಿರ ರೂ ಹಣವನ್ನು ದೋಚಿರುವುದಾಗಿ ಒಪ್ಪಿಕೊಂಡಿದ್ದಾನೆ.
ಆರೋಪಿ ಬಾಬ್ ಜಾನ್‌ರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಮೃತ ವೃದ್ಧೆಯ ಮರಣೋತ್ತರ ಪರೀಕ್ಷೆ ನಡೆಸಿ ಶವವನ್ನು ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ. ಇಂಥ ಹೇಯ ಕೃತ್ಯ ಎಸಗಿರುವ ಆರೋಪಿಗೆ ಗುಂಡಿಕ್ಕಿ ಕೊಲ್ಲಬೇಕು ಎಂದು ಮೃತ ವೃದ್ಧೆಯ ಮೊಮ್ಮಕ್ಕಳು ಹಾಗೂ ಸಂಬಂಧಿಕರು ಆಗ್ರಹಿಸಿದ್ದಾರೆ.















