ಮನೆ ಮನರಂಜನೆ ‘ಒಂದು ಸರಳ ಪ್ರೇಮಕಥೆ’; ಇದು ವಿನಯ್ ರಾಜ್ ಕುಮಾರ್ ಹೊಸ ಸಿನಿಮಾ

‘ಒಂದು ಸರಳ ಪ್ರೇಮಕಥೆ’; ಇದು ವಿನಯ್ ರಾಜ್ ಕುಮಾರ್ ಹೊಸ ಸಿನಿಮಾ

0

ನಟ ವಿನಯ್ ರಾಜ್ ಕುಮಾರ್ ಮತ್ತು ನಿರ್ದೇಶಕ ‘ಸಿಂಪಲ್’ ಅವರ ಕಾಂಬಿನೇಷನ್ ನ ಹೊಸ ಸಿನಿಮಾಕ್ಕೆ ‘ಒಂದು ಸರಳ ಪ್ರೇಮಕಥೆ’ ಎಂದು ಟೈಟಲ್ ಇಡಲಾಗಿದೆ.

ವಿಶೇಷವೆಂದರೆ, ಈ ಸಿನಿಮಾದಲ್ಲಿ ನಾಯಕಿಯರಾಗಿ ಸ್ವಾತಿಷ್ಠ ಕೃಷ್ಣನ್ ಮತ್ತು ‘ರಾಧಾ ಕೃಷ್ಣ’ ಧಾರಾವಾಹಿ ಖ್ಯಾತಿಯ ಮಲ್ಲಿಕಾ ಸಿಂಗ್ ನಟಿಸುತ್ತಿದ್ದಾರೆ.

ಮತ್ತೊಂದು ವಿಶೇಷವೆಂದರೆ, ನಿರ್ದೇಶಕ ‘ಸಿಂಪಲ್’ ಸುನಿ ಈಗಾಗಲೇ ಶೇ. 50ರಷ್ಟು ಚಿತ್ರೀಕರಣವನ್ನು ಮುಗಿಸಿದ್ದಾರೆ. ಸದ್ಯ 2ನೇ ಹಂತದ ಚಿತ್ರೀಕರಣ ಮೈಸೂರಿನಲ್ಲಿ ಬಿರುಸಿನಿಂದ ಸಾಗಿದೆ. ಈ ಮಧ್ಯೆ ಚಿತ್ರಕ್ಕೆ ‘ಒಂದು ಸರಳ ಪ್ರೇಮಕಥೆ’ ಎಂದು ಟೈಟಲ್ ಇಟ್ಟಿದ್ದು, ಅದರ ಫಸ್ಟ್ ಲುಕ್ ಅನ್ನು ಕೂಡ ಚಿತ್ರತಂಡ ರಿಲೀಸ್ ಮಾಡಿದೆ.

ಮೈಸೂರಿನಲ್ಲಿ ಈಗ ಕೊನೆಯ ಹಂತದ ಶೂಟಿಂಗ್

ಅಂದಹಾಗೆ, ಹತ್ತು ವರ್ಷಗಳ ಹಿಂದೆ ‘ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ’ ಸಿನಿಮಾ ಮಾಡಿದ್ದ ನಿರ್ದೇಶಕ ಸುನಿ, ಆ ಚಿತ್ರದ ಕುರಿತು ಒಂದಷ್ಟು ವಿಶೇಷ ಮಾಹಿತಿಗಳನ್ನು ಈಗ ಹಂಚಿಕೊಂಡಿದ್ದಾರೆ. ‘ನಾವು ಅಂದು ‘ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ’ ಸಿನಿಮಾಗೆ ಮೊದಲ ಇಟ್ಟಿದ್ದ ಟೈಟಲ್ ‘ಒಂದು ಸರಳ ಪ್ರೇಮಕಥೆ’ ಎಂದು.

ಆನಂತರ ಬದಲಾಗಿದೆ ‘ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ’ ಎಂದಾಯಿತು. ಕಳೆದ 10 ವರ್ಷಗಳಿಂದಲೂ ‘ಒಂದು ಸರಳ ಪ್ರೇಮಕಥೆ’ ಟೈಟಲ್ ಅನ್ನು ಯಾವುದಾದರೂ ಸಿನಿಮಾಗೆ ಇಡಬೇಕು ಎಂದು ಪ್ಲ್ಯಾನ್ ಮಾಡುತ್ತಲೇ ಇದ್ದೆವು. ಈಗ ಅದು ನೆರವೇರಿದೆ. ಈ ಸಿನಿಮಾಗೆ ಎಂ ಎಲ್ ಪ್ರಸನ್ನ ಅವರು ಸ್ಕ್ರಿಪ್ಟ್ ಬರೆದಿದ್ದಾರೆ.

ಕಳೆದ ಜನವರಿ 23ರಂದು ಸಿನಿಮಾಗೆ ಮುಹೂರ್ತ ನಡೆದಿತ್ತು. ಬೆಂಗಳೂರು, ಚಿಕ್ಕಪೇಟೆಯಲ್ಲಿ ಮೊದಲ ಹಂತದ ಶೂಟಿಂಗ್ ಮುಗಿಸಿದ್ದು, ಮೈಸೂರಿನಲ್ಲಿ ಈಗ ಕೊನೆಯ ಹಂತದ ಶೂಟಿಂಗ್ ಆರಂಭಿಸಿದ್ದೇವೆ..’ ಎಂದು ಮಾಹಿತಿ ನೀಡುತ್ತಾರೆ ಸುನಿ.

ಸಂಗೀತ ನಿರ್ದೇಶಕನ ಪಾತ್ರದಲ್ಲಿ ವಿನಯ್ ರಾಜ್ ಕುಮಾರ್

ಆರಂಭದಿಂದಲೂ ರೊಮ್ಯಾಂಟಿಕ್ ಕಾಮಿಡಿ ಸಿನಿಮಾಗಳನ್ನು ಇಷ್ಟಪಡುತ್ತಿದ್ದ ವಿನಯ್ಗೆ ಈ ಬಾರಿ ಅಂಥದ್ದೇ ಕಥೆ ಸಿಕ್ಕಿರುವುದು ಖುಷಿ ನೀಡಿದೆ. ಈ ಸಿನಿಮಾದಲ್ಲಿ ಅತಿಶಯ್ ಎಂಬ ಸಂಗೀತ ನಿರ್ದೇಶಕನ ಪಾತ್ರ ಮಾಡುತ್ತಿದ್ದಾರೆ.

ಇನ್ನು, ಈ ಸಿನಿಮಾದಲ್ಲಿ ರಾಜೇಶ್ ನಟರಂಗ, ಅರುಣಾ ಬಾಲರಾಜ್, ಸಾಧುಕೋಕಿಲ ಮುಂತಾದವರು ನಟಿಸುತ್ತಿದ್ದಾರೆ. ಹಾಡುಗಳಿಗೆ ವೀರ್ ಸಮರ್ಥ್ ಸಂಗೀತ ನೀಡುತ್ತಿದ್ದು, ಛಾಯಾಗ್ರಹಣವನ್ನು ಕಾರ್ತಿಕ್ ಮಾಡುತ್ತಿದ್ದಾರೆ.

ಹಿಂದಿನ ಲೇಖನಹವಾಮಾನ ಪರಿಸ್ಥಿತಿ ಅಧ್ಯಯನಕ್ಕಾಗಿ ಗೋವಾದಿಂದ ಹಾರಿಸಿದ್ದ ಬಲೂನ್ ಬೈಲಹೊಂಗಲದಲ್ಲಿ ಪತ್ತೆ
ಮುಂದಿನ ಲೇಖನಸಚಿವ ವಿ.ಸೋಮಣ್ಣರನ್ನು ಬಿಜೆಪಿಯಲ್ಲಿಯೇ ಉಳಿಸಿಕೊಳ್ಳಬೇಕು: ಅಭಿಮಾನಿಗಳ ಒತ್ತಾಯ