ಮನೆ ರಾಷ್ಟ್ರೀಯ ಜಮ್ಮು ಕಾಶ್ಮೀರದಲ್ಲಿ ಸೇವೆ ಸಲ್ಲಿಸುತ್ತಿದ್ದ ವಿಜಯಪುರ ಜಿಲ್ಲೆಯ ಯೋಧ ಸಾವು

ಜಮ್ಮು ಕಾಶ್ಮೀರದಲ್ಲಿ ಸೇವೆ ಸಲ್ಲಿಸುತ್ತಿದ್ದ ವಿಜಯಪುರ ಜಿಲ್ಲೆಯ ಯೋಧ ಸಾವು

0

ವಿಜಯಪುರ: ಜಿಲ್ಲೆಯ ತಿಕೋಟಾ ಮೂಲದ ಯೋಧ ರಾಜು ಕರ್ಜಗಿ (35) ಮೃತಪಟ್ಟಿದ್ದಾರೆ.

Join Our Whatsapp Group

ಭಾರತೀಯ ರೈಫಲ್ಸ್​ನ 51 ಯುನಿಟ್​ ನ ಮಹಾರ್ ರೆಜಿಮೆಂಟ್ 13 ರಲ್ಲಿ ಹವಾಲ್ದಾರ್ ಆಗಿ ಸೇವೆ ಸಲ್ಲಿಸುತ್ತಿದ್ದ ಕರ್ತವ್ಯ ನಿರತ ಯೋಧ ಜಮ್ಮು ಕಾಶ್ಮೀರದಲ್ಲಿ ಸೇವೆ ಸಲ್ಲಿಸುತ್ತಿರುವ ವೇಳೆ ಮೃತಪಟ್ಟಿದ್ದಾರೆ. ಯೋಧ ಮೃತಪಟ್ಟಿರುವ ಬಗ್ಗೆ ಸೇನಾಧಿಕಾರಿಗಳು ಹಾಗೂ ಜಿಲ್ಲಾಡಳಿತ ಕುಟುಂಬದವರಿಗೆ ಮಾಹಿತಿ ನೀಡಿದೆ.

ಮತ್ತೊಂದೆಡೆ ಯೋಧನ ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ. ಇಂದು ಅಥವಾ ನಾಳೆ ಯೋಧನ ಪಾರ್ಥೀವ ಶರೀರ ಜಿಲ್ಲೆಯ ಆಗಮಿಸುವ ನಿರೀಕ್ಷೆ ಇದೆ. ಯೋಧನ ಕುಟುಂಬದಲ್ಲಿ ದುಃಖ ಮಡುಗಟ್ಟಿದೆ.

ಹಿಂದಿನ ಲೇಖನಪಂಜಾಬ್ ನ್ಯಾಷನಲ್ ಬ್ಯಾಂಕ್ ಅಪ್ರೆಂಟಿಸ್ ನೇಮಕಾತಿ ಅಧಿಸೂಚನೆ ಬಿಡುಗಡೆ: ಆನ್‌ ಲೈನ್‌ನಲ್ಲಿ ಅರ್ಜಿ ಸಲ್ಲಿಸಿ
ಮುಂದಿನ ಲೇಖನಶಿವಮೊಗ್ಗದ ಬಟ್ಟೆ ಮಾರುಕಟ್ಟೆಯಲ್ಲಿ ಅಗ್ನಿಅವಘಡ; 8ಕ್ಕೂ ಅಧಿಕ ಅಂಗಡಿಗಳು ಸುಟ್ಟು ಕರಕಲು