ಮನೆ ರಾಷ್ಟ್ರೀಯ ಪತಿಯೊಂದಿಗೆ ಭಾರತ ಪ್ರವಾಸ ಕೈಗೊಂಡ ಸ್ಪ್ಯಾನಿಷ್ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ

ಪತಿಯೊಂದಿಗೆ ಭಾರತ ಪ್ರವಾಸ ಕೈಗೊಂಡ ಸ್ಪ್ಯಾನಿಷ್ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ

0

ನವದೆಹಲಿ: ಪತಿಯೊಂದಿಗೆ ಬೈಕ್ ನಲ್ಲೆ ಭಾರತ ಪ್ರವಾಸ ಕೈಗೊಂಡ ಸ್ಪಾನಿಷ್ ಮಹಿಳೆ ಮೇಲೆ ಜಾರ್ಖಂಡ್‌ ನ ದುಮ್ಕಾ ಜಿಲ್ಲೆಯಲ್ಲಿ ಸಾಮೂಹಿಕ ಅತ್ಯಾಚಾರ ನಡೆದಿರುವುದಾಗಿ ಪೊಲೀಸರು ಹೇಳಿದ್ದಾರೆ.

ಬೈಕ್ ನಲ್ಲೆ ಪ್ರವಾಸ ಹೊರಟ ದಂಪತಿಗಳು ದುಮ್ಕಾದ ಹನ್ಸ್ದಿಹಾ ಪ್ರದೇಶದ ನಿರ್ಜನ ಪ್ರದೇಶದಲ್ಲಿ ಶುಕ್ರವಾರ ತಡರಾತ್ರಿ ತಾತ್ಕಾಲಿಕ ಟೆಂಟ್‌ ಹಾಕಿ ನಿಂತ ವೇಳೆ ಈ ದುರ್ಘಟನೆ ನಡೆದಿದೆ ಎಂದು ಹೇಳಲಾಗಿದೆ.

ಈ ಕುರಿತು ಮಾಹಿತಿ ನೀಡಿದ ಪೊಲೀಸ್ ಅಧಿಕಾರಿ, ಪ್ರವಾಸಿ ದಂಪತಿಗಳು, ದ್ವಿಚಕ್ರ ವಾಹನದಲ್ಲಿ ಬಾಂಗ್ಲಾದೇಶದಿಂದ ದುಮ್ಕಾ ತಲುಪಿ ಬಿಹಾರ ಮೂಲಕ ನೇಪಾಳಕ್ಕೆ ತೆರಳುತ್ತಿದ್ದರು ಎಂದು ವರದಿಯಾಗಿದೆ. ಈ ವೇಳೆ ಕತ್ತಲಾದ ಕಾರಣ ದುಮ್ಕಾದಲ್ಲಿ ಟೆಂಟ್‌ ಹಾಕಿ ರಾತ್ರಿ ಕಳೆಯಲು ಹಂಸ್ದಿಹಾ ಮಾರುಕಟ್ಟೆ ಬಳಿ ಬೈಕ್ ನಿಲ್ಲಿಸಿದ್ದಾರೆ. ಈ ವೇಳೆ ಅಪರಿಚಿತರ ತಂಡ ದಂಪತಿಗಳನ್ನು ಬೆದರಿಸಿ ಅತ್ಯಾಚಾರ ಎಸಗಿದ್ದಾರೆ ಎಂದು ಹೇಳಿದ್ದಾರೆ.

ಈ ಘಟನೆಗೆ ಸಂಬಂಧಿಸಿ ಪೊಲೀಸರು ಮೂವರನ್ನು ಬಂಧಿಸಿದ್ದು, ತನಿಖೆ ನಡೆಸುತ್ತಿದ್ದಾರೆ.

ಸಂತ್ರಸ್ತೆಯನ್ನು ಪ್ರಸ್ತುತ ದುಮ್ಕಾದ ಫುಲೋ ಜಾನೋ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.