ಮನೆ ಅಪರಾಧ ಬೆಂಗಳೂರಿನಲ್ಲಿ ಕಂಡ ಕಂಡ ಹೆಣ್ಣು ಮಕ್ಕಳಿಗೆ ಮುತ್ತಿಟ್ಟು ಎಸ್ಕೇಪ್ ಆಗುತ್ತಿದ್ದ ಬೀದಿಕಾಮುಣ್ಣ ಕೊನೆಗೂ ಪೊಲೀಸ್‌ ವಶಕ್ಕೆ

ಬೆಂಗಳೂರಿನಲ್ಲಿ ಕಂಡ ಕಂಡ ಹೆಣ್ಣು ಮಕ್ಕಳಿಗೆ ಮುತ್ತಿಟ್ಟು ಎಸ್ಕೇಪ್ ಆಗುತ್ತಿದ್ದ ಬೀದಿಕಾಮುಣ್ಣ ಕೊನೆಗೂ ಪೊಲೀಸ್‌ ವಶಕ್ಕೆ

0

ಬೆಂಗಳೂರು: ರಸ್ತೆ, ಪಾರ್ಕು ಅಂತ ನೋಡದೇ ಸಿಕ್ಕ ಸಿಕ್ಕ ಮಹಿಳೆಯರನ್ನ ತಬ್ಬಿಕೊಂಡು, ಮುತ್ತು ಕೊಡುತ್ತಿದ್ದ ಬೀದಿ ಕಾಮಣ್ಣನೊಬ್ಬನನ್ನು ಪೊಲೀಸರು ವಶಕ್ಕೆ ಪಡೆದಿರುವ ಘಟನೆ ಪುಲಕೇಶಿನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಬೆಂಗಳೂರು ನಗರದ ವಿವಿಧ ಉದ್ಯಾನಗಳು, ಸಣ್ಣ ಪಾರ್ಕ್‌ಗಳು, ಮೈದಾನಗಳು ಸೇರಿದಂತೆ ಮಹಿಳೆಯರು ವಾಯು ವಿಹಾರ ಮಾಡುವ ಪ್ರಮುಖ ರಸ್ತೆಗಳಲ್ಲಿ ಈ ಕಾಮುಕನ ಅಟ್ಟಹಾಸ ಮಿತಿ ಮೀರಿತ್ತು. ಪುಲಕೇಶಿ ನಗರದಲ್ಲಿ ಇಬ್ಬರು ಮಹಿಳೆಯರಿಗೆ ಮುತ್ತುಕೊಟ್ಟು ದೌರ್ಜನ್ಯ ಎಸಗಿದ್ದ. ಕಾಮುಕನ ಹೆಸರು ಮದನ್ ಎಂದು ತಿಳಿದು ಬಂದಿದೆ.

ಜೂನ್‌ 6ರಂದು ಸಂಜೆ 7 ಗಂಟೆ ಸುಮಾರಿಗೆ ಕೂಕ್‌ಟೌನ್‌ನ ಮಿಲ್ಟನ್‌ ಪಾರ್ಕ್‌ ಬಳಿ ನಿಂತಿದ್ದ ಮಹಿಳೆಯೊಬ್ಬರ ಬಳಿ ಕಾಮುಕ ದುರ್ವರ್ತನೆ ತೋರಿದ್ದ ಘಟನೆ ಬೆಳಕಿಗೆ ಬಂದಿತ್ತು. ಮಹಿಳೆಯನ್ನ ತಬ್ಬಿಕೊಂಡ ಕಾಮುಕ ಬಲವಂತವಾಗಿ ತುಟಿಗೆ ಮುತ್ತುಕೊಟ್ಟಿದ್ದನಂತೆ. ಮತ್ತೊಂದು ಪಾರ್ಕ್‌ನಲ್ಲೂ ಮಹಿಳೆಯೊಬ್ಬರ ಬಳಿ ಇದೇ ರೀತಿ ವರ್ತಿಸಿದ್ದನಂತೆ. ಮಹಿಳೆ ಪ್ರಶ್ನೆ ಮಾಡಿದ್ರೆ ಯಾರಿಗೆ ಬೇಕಾದ್ರೋ ಹೇಳಿಕೊ ಅಂತ ಎಸ್ಕೇಪ್‌ ಆಗ್ತಿದ್ದನಂತೆ. ಈ ಕುರಿತು ಸಂತ್ರಸ್ತ ಮಹಿಳೆ ಪುಲಕೇಶಿ ನಗರ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು. ಈ ದೂರಿನ ಮೇರೆಗೆ ಪೊಲೀಸರು ಕಾಮುಕ ಮದನ್​ ಗಾಗಿ ಹುಡುಕಾಟ ನಡೆಸುತ್ತಿದ್ದಾಗ ಬಾಣಸವಾಡಿಯಲ್ಲಿ ಸಿಕ್ಕಿಬಿದ್ದಿದ್ದಾನೆ.

ಸದ್ಯ ಪುಲಕೇಶಿ ನಗರ ಪೊಲೀಸರು, ಕಾಮುಕ ಮದನ್​ ನನ್ನು ವಿಚಾರಣೆ ನಡೆಸಿದ್ದು, ವಿಚಾರಣೆ ವೇಳೆ ಮದನ್ ಅತಿಹೆಚ್ಚು ಅಶ್ಲೀಲ ಚಿತ್ರಗಳನ್ನು ನೋಡುತ್ತಿದ್ದ. ಬಳಿಕ ರಸ್ತೆಯಲ್ಲಿ ಬಂದು ಮಹಿಳೆಯರ ಮೇಲೆ ಎರಗುತ್ತಿದ್ದ ಎನ್ನುವುದು ಗೊತ್ತಾಗಿದೆ. ಇನ್ನು ಸಾಫ್ಟ್‌ವೇರ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಮದನ್, ಕೆಲ ತಿಂಗಳ ಹಿಂದೆ ಕೆಲಸ ಬಿಟ್ಟಿದ್ದ ಎಂದು ತಿಳಿದುಬಂದಿದೆ.