ಮಂಗಳೂರು(Mangalore): ಕಿಡಿಗೇಡಿಗಳಿಂದ ಹತ್ಯೆಯಾದಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಕುಟುಂಬದವರಿಗೆ ಒಟ್ಟು 50 ಲಕ್ಷ ರೂಗಳ ಚೆಕ್ಕನ್ನು ನೀಡಲಾಗಿದೆ.
ಈ ಕುರಿತು ಮಾಹಿತಿ ನೀಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಯಿ, ಬಿಜೆಪಿ ಸರ್ಕಾರದಿಂದ 25 ಲಕ್ಷ ಹಾಗೂ ಬಿಜೆಪಿ ಪಕ್ಷದಿಂದ 25 ಲಕ್ಷ ರೂಗಳ ನೆರವಿನ ಚೆಕ್ಕನ್ನು ಕುಟುಂಬದವರಿಗೆ ಹಸ್ತಾಂತರಿಸಲಾಗಿದೆ ಎಂದು ತಿಳಿಸಿದ್ದಾರೆ.
ಪ್ರವೀಣ್ ಅವರ ಕುಟುಂಬಕ್ಕೆ ಅವರೇ ಮೂಲ ಆಧಾರವಾಗಿದ್ದರು. ಚಿಕ್ಕ ಅಂಗಡಿಯಿಂದ ಬರುತ್ತಿದ್ದ ಆದಾಯದ ಮೂಲಕವೇ ಜೀವನ ನಿರ್ವಹಣೆ ಮಾಡಬೇಕಾಗುತ್ತಿತ್ತು. ಈಗ ಅವರು ಮೃತಪಟ್ಟಿರುವುದರಿಂದ ಕುಟುಂಬಕ್ಕೆ ದಿಕ್ಕು ತೋಚದಂತಾಗಿದೆ. ಈ ಹಿನ್ನೆಲೆಯಲ್ಲಿ ಅವರ ಕುಟುಂಬದವರಿಗೆ ಪಕ್ಷ ಮತ್ತು ಸರ್ಕಾರದ ವತಿಯಿಂದ ಎಲ್ಲಾ ರೀತಿಯ ಸಹಕಾರವನ್ನು ನೀಡಲಾಗುವುದು ಎಂದು ಮುಖ್ಯಮಂತ್ರಿ ಬೊಮ್ಮಾಯಿ ತಿಳಿಸಿದ್ದಾರೆ.