ಸಕಲೇಶಪುರ: ಇಲ್ಲಿಯ ಬಿಜೆಪಿ ಕಚೇರಿಯಲ್ಲಿ ವರ್ಷದ ಹಿಂದೆ ಪಕ್ಷದ ಮಂಡಲ ಅಧ್ಯಕ್ಷ ಮಂಜನಾಥ್ ಸಂಘಿ, ಮಾಜಿ ಅಧ್ಯಕ್ಷ ಡಿ. ರಾಜ್ ಕುಮಾರ್ ಹಾಗೂ ಇತರರು ಗುಂಡು, ತುಂಡು ಪಾರ್ಟಿ ಮಾಡುತ್ತಿದ್ದ ವಿಡಿಯೊ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಕಾರ್ಯಕ್ರಮವೊಂದು ಮುಗಿದ ನಂತರ, ರಾತ್ರಿ ಈ ಪಾರ್ಟಿ ನಡೆದಿದೆ ಎನ್ನಲಾಗಿದ್ದು, ಹಳೆಯ ವಿಡಿಯೊವನ್ನು ಪಕ್ಷದ ಕಾರ್ಯಕರ್ತರೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಇದರಿಂದ ಮುಜುಗರಕ್ಕೆ ಒಳಗಾದ ಮಂಡಲ ಅಧ್ಯಕ್ಷ ಮಂಜುನಾಥ್ ಸಂಘಿ ಅಧ್ಯಕ್ಷ ಸ್ಥಾನಕ್ಕೆ ಗುರುವಾರ ರಾಜೀನಾಮೆ ಸಲ್ಲಿಸಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
Saval TV on YouTube