ಮನೆ ಕಾನೂನು ಪತ್ನಿಯೂ ಪತಿಯಿಂದ ಈ ಕೆಲವು ಚೌಕಟ್ಟಿನ ಅಡಿ ಇದ್ದರೆ ಮಾತ್ರ ಜೀವನಾಂಶ ಪಡೆಯಲು ಸಾಧ್ಯ

ಪತ್ನಿಯೂ ಪತಿಯಿಂದ ಈ ಕೆಲವು ಚೌಕಟ್ಟಿನ ಅಡಿ ಇದ್ದರೆ ಮಾತ್ರ ಜೀವನಾಂಶ ಪಡೆಯಲು ಸಾಧ್ಯ

0

ವಿಚ್ಛೇದನ (ವಿವಾಹ ವಿಚ್ಛೇದನ) ಪ್ರಕ್ರಿಯೆ ಮತ್ತು ಅದರ ಸುತ್ತಮುತ್ತಿರುವ ಆರ್ಥಿಕ ಸಹಾಯ, ವಿಶೇಷವಾಗಿ ಜೀವನಾಂಶ ವಿಚ್ಛೇದನ ಪ್ರಕ್ರಿಯೆಯು ಹಿಂದಿನ ವಿವಾಹ ಸಂಬಂಧವನ್ನು ಕಾನೂನಿನ ಮೂಲಕ ಅಂತ್ಯಗೊಳಿಸುವ ಪ್ರಕ್ರಿಯೆಯಾಗಿದೆ. ಇದು ಸಾಮಾನ್ಯವಾಗಿ ಹಲವಾರು ಹಂತಗಳನ್ನು ಒಳಗೊಂಡಿರುತ್ತದೆ.

Join Our Whatsapp Group

ಮೊದಲಿಗೆ ಪತಿಯಾಗಲಿ ಅಥವಾ ಪತ್ನಿಯಾಗಲಿ, ಇಬ್ಬರಲ್ಲೊಬ್ಬರು ವಿಚ್ಛೇದನ ಅರ್ಜಿಯನ್ನು ಸಂಬಂಧಪಟ್ಟ ಕುಟುಂಬ ನ್ಯಾಯಾಲಯದಲ್ಲಿ ಸಲ್ಲಿಸುತ್ತಾರೆ. ಸೌಲಭ್ಯವಿದ್ದರೆ, ನ್ಯಾಯಾಲಯವು ಸಂಧಾನ ಅಥವಾ ಮಧ್ಯಸ್ಥಿಕೆ ಪ್ರಯತ್ನ ಮಾಡುತ್ತದೆ ಹೀಗಿದ್ದರೂ ಕೊಡ ಇಬ್ಬರು ಒಮ್ಮತ ಬಾರದೆ ಇದ್ದಾರೆ ಅವರಿಗೆ ವಿಚ್ಛೇದನ ನೀಡಲಾಗುವುದು.

ಇನ್ನೂ ವಿಚ್ಛೇದನ ನಂತರ ಪತ್ನಿಗೆ ಪತಿ ಜೀವನಾಂಶ ನೀಡುವುದು ಒಂದು ಕಾನೂನು ಆಗಿದೆ. ಇನ್ನೂ ವಿಚ್ಛೇದನದ ಪ್ರಕ್ರಿಯೆಯ ನಂತರ ಅಥವಾ ಅದರ ಪ್ರಕ್ರಿಯೆಯ ನಡುವೆ, ಹೆಣ್ಣು ಜೀವನಾಂಶ ಪಡೆಯಲು ಅರ್ಜಿಯನ್ನು ಸಲ್ಲಿಸಬಹುದು. ಅರ್ಜಿಯಲ್ಲಿ ಈ ವಿಷಯಗಳನ್ನು ಸ್ಪಷ್ಟಪಡಿಸಬೇಕು. ಪತ್ನಿಯು ಅರ್ಜಿಯಲ್ಲಿ ವಿಚ್ಛೇದನಕ್ಕೆ ಕಾರಣವಾದ ತಮಗೆ ಸಂಬಂಧಿಸಿದ ವಿವರಗಳು. ತಮ್ಮ ಆರ್ಥಿಕ ಸ್ಥಿತಿಯನ್ನು ವಿವರಿಸುವ ಮಾಹಿತಿಗಳು, ತಮ್ಮ ಆದಾಯ, ಆಸ್ತಿ, ಸಾಲಗಳು, ಮತ್ತು ವ್ಯಯಗಳು. ಪತಿಯ ಆದಾಯ, ಆಸ್ತಿ, ಮತ್ತು ಆರ್ಥಿಕ ಸಂಪತ್ತಿನ ವಿವರಗಳು. ತಮ್ಮ ದಿನನಿತ್ಯದ ಅಗತ್ಯ ವೆಚ್ಚಗಳು, ಆಹಾರ, ವಸತಿ, ವೈದ್ಯಕೀಯ ವೆಚ್ಚಗಳು, ಮಕ್ಕಳ ಶಿಕ್ಷಣ ವೆಚ್ಚಗಳು.ಪತಿಯೊಂದಿಗೆ ತಮಗೆ ಜೀವನದ ಸಮಯ, ತಮಗೆ ಅನುಭವವಾದ ಆರ್ಥಿಕ ಮತ್ತು ಭಾವನಾತ್ಮಕ ಬೆಂಬಲ.

ಇಷ್ಟೆಲ್ಲಾ ಸಲ್ಲಿಸಿದ್ದರು ಕೊಡ ಪತ್ನಿಯು ಕೆಲವೊಮ್ಮೆ ಜೀವನಾಂಶ ಪಡೆಯಲು ಸಾಧ್ಯವಿರುವುದಿಲ್ಲ ಏಕೆಂದ್ರೆ ಈ ಸಂದರ್ಭಗಳು ಸಾಮಾನ್ಯವಾಗಿ ಕಾನೂನುಮಟ್ಟದಲ್ಲಿ ನಿರ್ಧರಿಸಲಾಗುತ್ತವೆ.ಪತ್ನಿಯು ಪುನರ್ವಿವಾಹ ಮಾಡಿಕೊಂಡರೆ, ಅವರು ಹಿಂದಿನ ಪತಿಯಿಂದ ಜೀವನಾಂಶ ಪಡೆಯಲು ಅರ್ಹರಾಗಿರುವುದಿಲ್ಲ. ಇದನ್ನು ಹಿಂದೂ ವಿವಾಹ ಕಾಯಿದೆ, 1955 ಅಡಿಯಲ್ಲಿ ಪ್ರಸ್ತುತಪಡಿಸಲಾಗಿದೆ.ಪತ್ನಿಯು ಸ್ವತಂತ್ರವಾಗಿ ಆರ್ಥಿಕವಾಗಿ ಸ್ವಾವಲಂಬಿಯಾಗಿ ಜೀವನ ನಡೆಸಲು ಸಾಮರ್ಥ್ಯ ಹೊಂದಿದ್ದರೆ ಅಥವಾ ಅವರ ಆದಾಯ ಮತ್ತು ಆಸ್ತಿಗಳು ಜೀವನಾಂಶವನ್ನು ಅಗತ್ಯವಿಲ್ಲದಂತೆ ಮಾಡಲು ಸಾಕಾಗುವುದೆಂದರೆ, ಅವರು ಪತಿಯಿಂದ ಆರ್ಥಿಕ ಸಹಾಯ ಪಡೆಯಲು ಅರ್ಹರಾಗಿರುವುದಿಲ್ಲ.

ಪತ್ನಿಯು ವಿಚ್ಛೇದನದ ನಂತರ ಅಥವಾ ಅದರ ವೇಳೆ ದ್ರೋಹ ಹೊಂದಿರುವುದು ಸಾಬೀತಾದರೆ, ಅವರು ಪತಿಯಿಂದ ಜೀವನಾಂಶ ಪಡೆಯಲು ಅರ್ಹರಾಗಿರುವುದಿಲ್ಲ. ಪತಿಯ ಕಡಿಮೆ ಆದಾಯ ಹೊಂದಿದ್ದಾಗ. ಪತ್ನಿಯು ಪತಿಯ ಮೇಲೆ ನಿಂದನೆ, ಕ್ರೂರತೆ, ಅಥವಾ ದುರಾಚಾರ ತೋರಿಸಿದ್ದರೆ, ಅವರು ಪತಿಯಿಂದ ಜೀವನಾಂಶ ಪಡೆಯಲು ಅರ್ಹರಾಗಿರುವುದಿಲ್ಲ. ಪತ್ನಿಯ ನಿರ್ದಿಷ್ಟ ನಿಯಮಗಳಿಗೆ ಉಲ್ಲಂಘನೆ ಮಾಡಿದಾಗ ಈ ಪ್ರಕರಣಗಳಲ್ಲಿ, ಪತ್ನಿಯು ಪತಿಯಿಂದ ಕಾನೂನಾತ್ಮಕ ರೀತಿಯಲ್ಲಿ ಜೀವನಾಂಶ ಪಡೆಯಲು ಹಕ್ಕಿಲ್ಲದಂತೆ ಮಾಡುತ್ತದೆ.