ಮನೆ ಅಪರಾಧ ಬುರ್ಖಾ ಧರಿಸಿ ಬಂದು ಸ್ವಂತ ಮನೆಯಿಂದ ಲಕ್ಷಾಂತರ ಮೌಲ್ಯದ ಚಿನ್ನಾಭರಣ, ನಗದು ದೋಚಿದ ಮಹಿಳೆ

ಬುರ್ಖಾ ಧರಿಸಿ ಬಂದು ಸ್ವಂತ ಮನೆಯಿಂದ ಲಕ್ಷಾಂತರ ಮೌಲ್ಯದ ಚಿನ್ನಾಭರಣ, ನಗದು ದೋಚಿದ ಮಹಿಳೆ

0

ದೆಹಲಿ: ಉತ್ತಮ್ ನಗರದಲ್ಲಿ ಮಹಿಳೆಯೊಬ್ಬರು ತನ್ನ ಸ್ವಂತ ಮನೆಯಿಂದ ಲಕ್ಷಾಂತರ ಮೌಲ್ಯದ ಚಿನ್ನಾಭರಣ ಮತ್ತು ನಗದು ದೋಚಿರುವ ಪ್ರಕರಣ ಬೆಳಕಿಗೆ ಬಂದಿದೆ.

ಮಧ್ಯಾಹ್ನ 2ರಿಂದ 2.30ರ ನಡುವೆ ಮನೆಯಲ್ಲಿದ್ದ ಲಕ್ಷ ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ 25 ಸಾವಿರ ನಗದು ಕಳ್ಳತನವಾಗಿದೆ ಎಂದು ದೂರಿನಲ್ಲಿ ತಿಳಿತಸಲಾಗಿತ್ತು.

ದೂರು ಆಧರಿಸಿ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಆದರೆ, ಮನೆಯಲ್ಲಿ ಬಲವಂತವಾಗಿ ಪ್ರವೇಶಿಸಿದ ಯಾವುದೇ ಲಕ್ಷಣಗಳು ಕಂಡುಬಂದಿಲ್ಲ. ಮುಖ್ಯ ಬಾಗಿಲು ಮತ್ತು ಬೀಗ ಯಥಾಸ್ಥಿತಿಯಲ್ಲಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ನಂತರ ಪೊಲೀಸರು ಆ ಪ್ರದೇಶದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದರು. ವೀಡಿಯೋದಲ್ಲಿ ಬುರ್ಖಾ ಧರಿಸಿದ್ದ ಮಹಿಳೆಯೊಬ್ಬರು ಅನುಮಾನಾಸ್ಪದವಾಗಿ ಮನೆಯೊಳಗೆ ಬರುತ್ತಿರುವುದು ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ಕಮಲೇಶ್ ಅವರ ಹಿರಿಯ ಪುತ್ರಿ ಶ್ವೇತಾಳನ್ನು ಬಂಧಿಸಿದ್ದಾರೆ.

ವಿಚಾರಣೆ ವೇಳೆ, ಶ್ವೇತಾ ತನ್ನ ತಾಯಿ ತನ್ನ ತಂಗಿಯನ್ನು ಹೆಚ್ಚು ಪ್ರೀತಿಸುತ್ತಿದ್ದರಿಂದ ದರೋಡೆ ನಡೆಸಿದ್ದೇನೆ ಎಂದು ಹೇಳಿದ್ದಾಳೆ.

ಸಾಲವಿದ್ದು, ಬಾಕಿ ತೀರಿಸಲು ದರೋಡೆಗೆ ಯೋಜನೆ ರೂಪಿಸಿದ್ದಳು. ದರೋಡೆಯ ದಿನದಂದು, ಶ್ವೇತಾ ತನ್ನ ತಾಯಿಯ ಬಳಿ ಕೀಗಳನ್ನು ತೆಗೆದುಕೊಂಡಿದ್ದಳು. ಪ್ರವೇಶ ಪಡೆಯುವ ಮೊದಲು ಸಾರ್ವಜನಿಕ ಶೌಚಾಲಯದಲ್ಲಿ ಬುರ್ಖಾವನ್ನು ಧರಿಸಿದ್ದಳು. ಕದ್ದ ಕೀಗಳನ್ನು ಬಳಸಿ, ಮನೆಗೆ ಬಂದು ಒಡವೆಗಳನ್ನು ಕದ್ದು ಪರಾರಿಯಾಗಿದ್ದಳು.

ಕೆಲವು ಆಭರಣಗಳನ್ನು ಮಾರಾಟ ಮಾಡಿರುವುದಾಗಿ ಶ್ವೇತಾ ಒಪ್ಪಿಕೊಂಡಿದ್ದರೂ, ಕದ್ದ ಒಡವೆಗಳನ್ನು ಪೊಲೀಸರು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.