ಮನೆ ರಾಜ್ಯ ತ್ರಿವಳಿ ಗಂಡು ಮಕ್ಕಳಿಗೆ ಜನ್ಮ ನೀಡಿದ ಕಟ್ಟಡ ಕಾರ್ಮಿಕ ಮಹಿಳೆ

ತ್ರಿವಳಿ ಗಂಡು ಮಕ್ಕಳಿಗೆ ಜನ್ಮ ನೀಡಿದ ಕಟ್ಟಡ ಕಾರ್ಮಿಕ ಮಹಿಳೆ

0

ವಾಡಿ: ಕಟ್ಟಡ ಕಾರ್ಮಿಕ ಮಹಿಳೆಯೊಬ್ಬರು ತ್ರಿವಳಿ ಗಂಡು ಮಕ್ಕಳಿಗೆ ಜನ್ಮ ನೀಡಿದ ಘಟನೆ ಚಿತ್ತಾಪುರ ತಾಲೂಕಿನ ಕೊಲ್ಲೂರು ಗ್ರಾಮದಲ್ಲಿ ಸಂಭವಿಸಿದೆ.

ಕೊಲ್ಲೂರು ಗ್ರಾಮ ನಿವಾಸಿ, ನಿಂಗಮ್ಮ ಈಶಪ್ಪ ಲಾಡ್ಲಾಪುರ(22), ಮೂರು ಮಕ್ಕಳಿಗೆ ಜನ್ಮ ನೀಡಿದ ಮಹಿಳೆ.

ಗುರುವಾರ ಸಂಜೆ ಮೊದಲ ಹೆರಿಗೆಯ ಬೇನೆ ಕಾಣಿಸಿಕೊಂಡ ಪ್ರಯುಕ್ತ ಗ್ರಾಮದ ಆಶಾ ಕಾರ್ಯಕರ್ತೆ ನಾಗಮ್ಮ ಕುಲ್ಕುಂದಿ, ಎಂಟು ತಿಂಗಳ ಗರ್ಭಿಣಿ ಮಹಿಳೆ ನಿಂಗಮ್ಮಳನ್ನು ಕೊಲ್ಲೂರು ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆತಂದು ದಾಖಲಿಸಿದ್ದಾರೆ.

ಮಹಿಳೆ ಮೂರು ಗಂಡು ಶಿಶುಗಳಿಗೆ ಜನ್ಮ ನೀಡಿದ್ದಾರೆ. ಒಂದು ಮಗು 2ಕೆಜಿ, ಇನ್ನೊಂದು ಮಗು 2ಕೆಜಿ 400ಗ್ರಾಂ. ಮೂರನೇ ಮಗು ಒಂದು ಕೆಜಿ ತೂಕಕ್ಕೆ ಕಡಿಮೆಯಿದೆ. ಹೆರಿಗೆ ನಂತರ ಹೆಚ್ಚಿನ ಚಿಕಿತ್ಸೆಗಾಗಿ ರಾತ್ರಿಯೇ ತಾಯಿ ಮಕ್ಕಳನ್ನು ಯಾದಗಿರಿ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದೇನೆ. ಬಾಣಂತಿ ಮತ್ತು ಇಬ್ಬರು ಮಕ್ಕಳು ಆರೋಗ್ಯವಾಗಿದ್ದಾರೆ.

ಹಿಂದಿನ ಲೇಖನಕೊಪ್ಪಳದಲ್ಲಿ ಹೆಚ್ಚಾದ ಜ್ವರ, ಮೈ ಕೈ ನೋವು, ಕೀಲು ನೋವು: ಚಿಕನ್ ​​ಗುನ್ಯಾ ಭೀತಿ
ಮುಂದಿನ ಲೇಖನಹಾರ್ನ್ ಮಾಡಿದ್ದಕ್ಕೆ ಸಾರಿಗೆ ಬಸ್ ಅಡ್ಡಗಟ್ಟಿ ಪುಂಡಾಟ ಮೆರೆದ ಯುವಕರು