Saval TV on YouTube
ಬೆಂಗಳೂರು(Bengaluru): ದ್ವಿಚಕ್ರ ವಾಹನಕ್ಕೆ ಖಾಸಗಿ ಬಸ್ ಡಿಕ್ಕಿಯಾದ ಪರಿಣಾಮ ಮಹಿಳೆ ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ಯಶವಂತಪುರದ ಸತ್ವ ಅಪಾರ್ಟ್ಮೆಂಟ್ ಬಳಿ ನಡೆದಿದೆ.
ನುತಾ ಮೃತಪಟ್ಟ ಮಹಿಳೆ.
ವಿನುತ ಖಾಸಗಿ ಕಂಪನಿಯಲ್ಲಿ ಅಕೌಂಟೆಂಟ್ ಆಗಿ ಕೆಲಸ ನಿರ್ವಹಿಸುತ್ತಿದ್ದರು. ಈ ನಡುವೆ ಇಂದು ಕೆಲಸಕ್ಕೆ ದ್ವಿಚಕ್ರವಾಹನದಲ್ಲಿ ತೆರಳುತ್ತಿದ್ದ ವೇಳೆ ಫೋನ್ ಬಂತು ಎಂದು ಗಾಡಿ ಸೈಡಿಗೆ ಹಾಕಿ ವಿನುತಾ ಮಾತನಾಡುತ್ತಿದ್ದರು. ಈ ವೇಳೆ ಹಿಂದೆಯೇ ಬಸ್ ನಿಲ್ದಾಣದಲ್ಲಿ ಜನರನ್ನು ಹತ್ತಿಸಿ ಕೊಳ್ಳುತ್ತಿದ್ದ ಬಸ್ ಚಾಲಕ ಏಕಾಏಕಿ ಬಸ್ ಚಾಲನೆ ಮಾಡಿದ್ದಾನೆ.
ಈ ಸಮಯದಲ್ಲಿ ಬಸ್ ಸ್ಕೂಟಿಗೆ ಡಿಕ್ಕಿ ಹೊಡೆದಿದ್ದು ಮಹಿಳೆ ವಿನುತಾ ತಲೆ ಮೇಲೆ ಬಸ್ ಹರಿದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಸ್ಥಳಕ್ಕೆ ಯಶವಂತರಪುರ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.














