ಹೂವಿನಹಡಗಲಿ: ಓರ್ವ ಮಹಿಳೆ ತನ್ನ ಇಬ್ಬರು ಮಕ್ಕಳೊಂದಿಗೆ ಆತ್ಮಹತ್ಯೆ ಮಾಡಿಕೊಂಡ ಧಾರುಣ ಘಟನೆ ತಾಲೂಕಿನ ತಿಪ್ಪಾಪುರ ಗ್ರಾಮದಲ್ಲಿ ಸೆ.14ರ ಶನಿವಾರ ನಡೆದಿದೆ.
ಹಾಲ್ ತಿಮ್ಲಾಪುರ ಗ್ರಾಮದ ಶಿವಮ್ಮ ತಾನು ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ತನ್ನ ಇಬ್ಬರು ಮಕ್ಕಳಾದ ದುರ್ಗಮ್ಮ (3), ಈಶ್ವರಿ (10 ತಿಂಗಳು) ಇವರನ್ನು ಸಾಯಿಸಿ ತಾನೂ ನೇಣು ಹಾಕಿಕೊಂಡು ಆತ್ಮಹತ್ಯ ಮಾಡಿಕೊಂಡಿದ್ದಾರೆ.
ಕಳೆದ 5 ವರ್ಷದ ಹಿಂದೆ ಹಾಲ್ ತಿಮ್ಲಾಪುರ ಗ್ರಾಮದ ಶಿವಮ್ಮ ಅವರು ತಿಪ್ಪಾಪುರ ಗ್ರಾಮದ ದಬ್ಗಡಿ ರಾಜ ಅವರೊಂದಿಗೆ ಪ್ರೀತಿಸಿ ಮದುವೆಯಾಗಿದ್ದರು. ಬೆಳಿಗ್ಗೆ ತಿಪ್ಪಾಪುರ ಗ್ರಾಮದ ಗಂಡನ ಮನೆಯಲ್ಲಿ ಎಲ್ಲರೂ ಹೊಲಕ್ಕೆ ಹೋಗಿದ್ದ ಸಂದರ್ಭ ಅವರ ಮನೆಯ ಪಕ್ಕದಲ್ಲಿಯೇ ಇರುವ ಗುಡಿಸಲಿನಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯ ಮಾಡಿಕೊಂಡಿದ್ದಾರೆ.
ಘಟನಾ ಸ್ಥಳಕ್ಕೆ ಪೊಲೀಸ್ ಸಬ್ ಇನ್ಸಪೆಕ್ಟರ್ ವಿಜಯ್ ಕೃಷ್ಣ ಭೇಟಿ ನೀಡಿ ಪರಿಶೀಲನೆ ನಡೆಸಿ ತನಿಖೆ ಕೈಗೊಂಡಿದ್ದಾರೆ. ಒಂದೇ ಕುಟುಂಬದ ಮೂವರ ಸಾವಿಗೆ ನಿಖರ ಕಾರಣ ತಿಳಿದಿಲ್ಲ.