ಮನೆ ಅಪರಾಧ ಮನೆ ಹಿತ್ತಲಿನಲ್ಲಿ ಗಾಂಜಾ ಬೆಳಸಿ ರೀಲ್ಸ್​ ಮಾಡಿದ್ದ ಮಹಿಳೆ ಬಂಧನ

ಮನೆ ಹಿತ್ತಲಿನಲ್ಲಿ ಗಾಂಜಾ ಬೆಳಸಿ ರೀಲ್ಸ್​ ಮಾಡಿದ್ದ ಮಹಿಳೆ ಬಂಧನ

0

ಬೆಂಗಳೂರು: ಮನೆಯ ಹೂವಿನ ಕುಂಡದಲ್ಲಿ ಗಾಂಜಾ ಗಿಡ ಬೆಳೆದಿದ್ದ ದಂಪತಿಯನ್ನು ಸದಾಶಿವನಗರ ಪೊಲೀಸರು ಬಂಧಿಸಿ ಸ್ಟೇಷನ್ ಬೇಲ್ ಮೇಲೆ ಬಿಡುಗಡೆ ಮಾಡಿದ್ದಾರೆ.

Join Our Whatsapp Group

ನೇಪಾಳ ಮೂಲದ ಊರ್ಮಿಳಾ ಹಾಗೂ ಗುರುಂಗ್ ಗಾಂಜಾ ಬೆಳಸಿದ್ದ ಆರೋಪಿಗಳು. ದಂಪತಿ ವಿರುದ್ಧ ಸದಾಶಿವನಗರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದಂಪತಿ ಸದಾಶಿವನಗರದ ಎಮ್​ಎಸ್​ಆರ್​ ನಗರದಲ್ಲಿ ವಾಸವಾಗಿದ್ದರು. ದಂಪತಿ ಮನೆ ಬಾಲ್ಕನಿಯಲ್ಲಿದ್ದ ಕುಂಡದಲ್ಲಿ ಗಾಂಜಾ ಗಿಡ ಬೆಳಸಿದ್ದರು. ಇತ್ತೀಚಿಗೆ ಊರ್ಮಿಳಾ ಮನೆಯ ಬಾಲ್ಕನಿಯಲ್ಲಿ ರೀಲ್ಸ್​ ಮಾಡಿ ಪೋಸ್ಟ್ ಮಾಡಿದ್ದಳು. ಊರ್ಮಿಳಾ ಮಾಡಿದ್ದ ರೀಲ್ಸ್​ ನಲ್ಲಿ ಗಾಂಜಾ ಗಿಡ ಕಾಣಿಸಿಕೊಂಡಿದೆ. ಗಾಂಜಾ ಗಿಡ ಕುರಿತು ವ್ಯಕ್ತಿಯೋರ್ವ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ.

ಮಾಹಿತಿ ಆಧರಿಸಿ ಪರಿಶೀಲನೆ ನಡೆಸಿದಾಗ ಗಾಂಜಾ ಗಿಡ ಪತ್ತೆಯಾಗಿದೆ. 15 ವಿವಿಧ ಮಾದರಿಯ ಹೂವಿನ ಗಿಡಗಳ ಮಧ್ಯೆ ದಂಪತಿ ಗಾಂಜಾ ಗಿಡ ಬೆಳೆಸಿದ್ದರು. 54 ಗ್ರಾಂ ಗಾಂಜಾ ಸೊಪ್ಪನ್ನು ಸದಾಶಿವನಗರ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಬೆಂಗಳೂರು ಸಿಸಿಬಿ ಅಧಿಕಾರಿಗಳು ಮತ್ತು ಜೆಬಿ ನಗರ ಪೊಲೀಸರು ಜಂಟಿಯಾಗಿ ಬೆಂಗಳೂರು ಜೀವನ್ ಭೀಮಾನಗರ ಹಾಗೂ ಆವಲಹಳ್ಳಿಯಲ್ಲಿನ ನಕಲಿ ಲೈಜಾಲ್ ಹಾಗೂ ಹಾರ್ಪಿಕ್ ಗೋಡಾನಗಳ ಮೇಲೆ ದಾಳಿ ಮಾಡಿ, ಕೋಟ್ಯಾಂತರ ಮೌಲ್ಯದ ವಸ್ತುಗಳನ್ನು ಸೀಜ್ ಮಾಡಿದ್ದಾರೆ. ಗೋಡನ್​ ಗಳು ಅನಿಲ್ ಪಟೇಲ್ ಹಾಗೂ ಅನಂತ್ ಪಟೇಲ್ ಎಂಬುವವರಿಗೆ ಸೇರಿವೆ. ಇಬ್ಬರೂ ಮಾಲೀಕರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.