ಮನೆ ಸುದ್ದಿ ಜಾಲ ಸಂಗೀತ ವಿಶ್ವದ ಏಕ ಸಾಮ್ಯತೆ ಹೊಂದಿರುವ ಒಂದು ಯೋಗ: ಅರುಣ್ ಸಾಗರ್

ಸಂಗೀತ ವಿಶ್ವದ ಏಕ ಸಾಮ್ಯತೆ ಹೊಂದಿರುವ ಒಂದು ಯೋಗ: ಅರುಣ್ ಸಾಗರ್

0

ಮೈಸೂರು(Mysuru): ಸಂಗೀತವು ವಿಶ್ವದ ಏಕ ಸಾಮ್ಯತೆ ಹೊಂದಿರುವ ಒಂದು ಯೋಗವಾಗಿದೆ. ಜಗತ್ತಿನ ಎಲ್ಲ ರಾಷ್ಟ್ರ ಸಂಸ್ಕೃತಿ, ಭಾಷೆ, ಗೌರವಿಸುವ ಭಾರತೀಯ ಮೂಲ ಕಲೆಯಾಗಿದೆ ಎಂದು ಕಲಾ ನಿರ್ದೇಶಕರು ಹಾಗೂ ಚಲನಚಿತ್ರ ನಟರಾದ ಅರುಣ್ ಸಾಗರ್ ಹೇಳಿದರು.

ನಗರದ ಜೆ ಎಲ್ ಬಿ ರಸ್ತೆಯಲ್ಲಿರುವ ನಾದಬ್ರಹ್ಮ ಸಂಗೀತ ಸಭಾಂಗಣದಲ್ಲಿ ಪ್ರಸಾದ್‌ ಸ್ಕೂಲ್ ಆಫ್ ರಿದಮ್ಸ್ ತಾಳವಾದ್ಯ ಪ್ರತಿಷ್ಠಾನ ಟ್ರಸ್ಟ್’ನ 16 ನೇ ವರ್ಷದ ಶಾಲಾ ವಾರ್ಷಿಕೋತ್ಸವ ಸಮಾರಂಭದಲ್ಲಿ ಕಲಾಪೋಷಕರಿಗೆ ಕಲಾ ರತ್ನ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು.

ಆರೋಗ್ಯ, ಸಂಸ್ಕೃತಿ ಜೀವನ, ಶಿಸ್ತು ಮೂಡಿಸುವಲ್ಲಿ ಸಂಗೀತವು ದೊಡ್ಡ ಪಾತ್ರ ವಹಿಸುತ್ತದೆ.  ಸಾಂಸ್ಕೃತಿಕ ರಾಜಧಾನಿ ಮೈಸೂರು ಕಲಾವಿದರ ತವರೂರು ಇದಕ್ಕೆ ಸಂಗೀತದ ಶಕ್ತಿಯೇ ಕಾರಣ ಸಂಗೀತ ಅಭ್ಯಾಸದಿಂದ ಆರೋಗ್ಯ ವೃದ್ಧಿಸುತ್ತದೆ. ಶಂಖನಾದ ಶ್ವಾಸಕೋಶ ಶುದ್ಧಿ ಮಾಡುತ್ತದೆ ಜನಪದ ಶೈಲಿ ಉತ್ತಮ ಆರೋಗ್ಯಕ್ಕೆ ಸಹಕಾರಿ ವೇದಮಂತ್ರ ಮೆದುಳಿಗೆ ಶಕ್ತಿ ಹೆಚ್ಚಿಸುತ್ತದೆ ಎಂದರು.

ಹಿಂದೂಸ್ತಾನಿ, ಕರ್ನಾಟಿಕ್ ಸಂಗೀತ ಪ್ರದರ್ಶನಕ್ಕೆ ವಿದೇಶಗಳಲ್ಲಿ ಗೌರವವಿದೆ ಕಟ್ಟುನಿಟ್ಟಿನ ಸಂಗೀತ ಪ್ರಕಾರದಿಂದ ಆರೋಗ್ಯ ವೃದ್ಧಿಯಾಗುತ್ತದೆ. ಮಕ್ಕಳನ್ನು ಕಡ್ಡಾಯವಾಗಿ ಸಂಗೀತ ಶಾಲೆಗೆ ಸೇರಿಸಿದರೆ ಮುಂದಿನ ಅವರ ಭವಿಷ್ಯ ಉಜ್ವಲವಾಗಿರುತ್ತದೆ. ಇಂದಿನ ಕಾಲದಲ್ಲಿ ಆಕಾಶವಾಣಿ ದೂರದರ್ಶನದಲ್ಲಿ ಸಂಗೀತ ಕಾರ್ಯಕ್ರಮಗಳು ಜನಸಾಮಾನ್ಯರು ಅವಲಂಬಿತರಾಗಿದ್ದರು ಅದು ಆರೋಗ್ಯದ ಮನಃಶಾಂತಿ ಹೆಚ್ಚಾಗಿ ಸಿಗುತ್ತದೆ  ಎಂದು ಸ್ಮರಿಸಿದರು.

ಕಲಾ ರತ್ನ ಪ್ರಶಸ್ತಿ ಪ್ರದಾನ

ಚಲನಚಿತ್ರ ನಟರು, ರಂಗಭೂಮಿ ಕಲಾವಿದ ಅರುಣ್ ಸಾಗರ್, ಚಲನಚಿತ್ರ ನಟ,  ರಂಗ ಭೂಮಿ ಕಲಾವಿದ ಶಿವಾಜಿ ರಾವ್ ಜಾದವ್, ಸಮಾಜ ಸೇವಕ ವಿಕ್ರಮ್ ಅಯ್ಯಂಗಾರ್, ನಾದಸ್ವರ. ಆಸ್ಥಾನ ವಿದ್ವಾಂಸ ವಿದ್ವಾನ್ ಕೃಷ್ಣಮೂರ್ತಿ, ಮ್ಯಾಂಡೋಲಿನ್ ವಾದಕ ವಿದ್ವಾನ್ ಸಿ. ವಿಶ್ವನಾಥ್, ಕೊಳಲು ವಾದಕ ವಿದ್ವಾನ್ ದತ್ತಾತ್ರೇಯ, ತಬಲಾ ವಾದಕ ಪಂಡಿತ್ ಬೀಮಾ ಶಂಕರ್ ಬಿದನೂರು, ಡೋಲು ವಾದಕ ವಿದ್ವಾನ್ ಪುಟ್ಟಸ್ವಾಮಿ, ವಾಗ್ಮಿಗಳು, ದಾಸರು ಪದ ಗಾಯಕಿ ವಿದೂಷಿ ದೀಪಿಕಾ ಪಾಂಡುರಂಗಿ, ನಟ ವಿಜಯ ರಾಘವೇಂದ್ರ ಹಾಗೂ ಹಿನ್ನೆಲೆ ಗಾಯಕ ವಿಜಯ್ ಅರಸ್ ಅವರಿಗೆ ಇ “ಕಲಾರತ್ನ “ಪ್ರಶಸ್ತಿಯನ್ನು ನೀಡಿ ಸನ್ಮಾನಿಸಲಾಯಿತು

ಆನಂತರ ಶಾಲೆಯಲ್ಲಿ ಉತ್ತೀರ್ಣಗೊಂಡ ಮಕ್ಕಳಿಗೆ ಟ್ರಿನಿಟಿ ಕಾಲೇಜ್ ಆಫ್ ಲಂಡನ್‌’ನ ಪ್ರಮಾಣ ಪತ್ರ ವಿತರಿಸಲಾಯಿತು

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಹಿರಿಯ ಸಮಾಜಸೇವಕರಾದ ಕೆ ರಘುರಾಮ್ ವಾಜಪೇಯಿ, ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷ ಹೇಮಾನಂದೀಶ್, ಖ್ಯಾತ ಮನೋವೈದ್ಯ ಡಾ.ರೇಖಾ ಮನಶಾಂತಿ, ಪ್ರಸಾದ್ ಸ್ಕೂಲ್ ಆಫ್ ರಿದಮ್ಸ್ ಅಧ್ಯಕ್ಷ ಡಾ. ಸಿ ಆರ್ ರಾಘವೇಂದ್ರ ಪ್ರಸಾದ್, ನಿರೂಪಕ ಅಜಯ್ ಶಾಸ್ತ್ರಿ, ಉಪಾಧ್ಯಕ್ಷೆ ಆರ್ ಮಂಗಳ ಭಾಗವಹಿಸಿದ್ದರು.