ಮನೆ ಸುದ್ದಿ ಜಾಲ ಅಕಾಲಿಕ ಮಳೆಯಲ್ಲಿ ಕೊಚ್ಚಿ ಹೋಗುತ್ತಿದ್ದ ಶೇಂಗಾವನ್ನು ಉಳಿಸಲು ಯುವ ರೈತನ ಪರದಾಟ

ಅಕಾಲಿಕ ಮಳೆಯಲ್ಲಿ ಕೊಚ್ಚಿ ಹೋಗುತ್ತಿದ್ದ ಶೇಂಗಾವನ್ನು ಉಳಿಸಲು ಯುವ ರೈತನ ಪರದಾಟ

0

ಮುಂಬೈ: ಬಿಸಿಲಿನ ಶಾಖ, ಶೀತ ಮತ್ತು ನಿಯಮಿತ ಕಾಲೋಚಿತ ಮಳೆಯನ್ನು ಸಹಿಸಿಕೊಂಡು ತಮ್ಮ ಬೆಳೆಗಳನ್ನು ಮಾರಲು ಮಾರುಕಟ್ಟೆಗೆ ಬಂದ ರೈತರು ಮಹಾರಾಷ್ಟ್ರದಲ್ಲಿ ಸುರಿದ ಅಕಾಲಿಕ ಮಳೆಯಿಂದ ಕಂಗಾಲಾಗಿದ್ದಾರೆ. ತಮ್ಮ ಉತ್ಪನ್ನಗಳನ್ನು ನ್ಯಾಯಯುತ ಬೆಲೆಗೆ ಮಾರಾಟ ಮಾಡುವ ಆಶಯದೊಂದಿಗೆ ಮಾರುಕಟ್ಟೆಗೆ ಬಂದ ಅವರಿಗೆ ಅನಿರೀಕ್ಷಿತ ಮಳೆಯಿಂದ ಆತಂಕ ಶುರುವಾಗಿದೆ. ತಮ್ಮ ಬೆಳೆಗಳಿಗೆ ಸಾಕಷ್ಟು ಆಶ್ರಯ ಅಥವಾ ರಕ್ಷಣೆ ಲಭ್ಯವಿಲ್ಲದ ಕಾರಣ ಮಳೆಯಲ್ಲಿ ಕೊಚ್ಚಿಹೋಗುತ್ತಿದ್ದ ಶೇಂಗಾವನ್ನು ಕಾಪಾಡಿಕೊಳ್ಳಲು ಯುವ ರೈತನ ಪರದಾಡುವ ವಿಡಿಯೋ ವೈರಲ್ ಆಗಿದೆ.

ಮನೋರಾ ಮಾರುಕಟ್ಟೆಯಲ್ಲಿ ಶೇಂಗಾ ಚೀಲಗಳ ಜೊತೆಗೆ ನಿಂತಿದ್ದ ಯುವಕನೊಬ್ಬ, ಮಳೆ ನೀರಿನಲ್ಲಿ ಹರಿದು ಹೋಗುತ್ತಿದ್ದ ತನ್ನ ಬೆಳೆಗಳನ್ನು ಕೈಯಲ್ಲಿ ಹಿಡಿದು ಕಾಪಾಡಲು ಶ್ರಮಿಸುತ್ತಿರುವ ದೃಶ್ಯ ಕ್ಯಾಮೆರಾದಲ್ಲಿ ಸೆರೆ ಸಿಕ್ಕಿದ್ದು, ಮಳೆ ನೀರಿನಲ್ಲಿ ಮುಳುಗುತ್ತಿರುವ ಶೇಂಗಾವನ್ನು ಕೈಯಿಂದ ಎತ್ತಿ, ಸುರಕ್ಷಿತ ಸ್ಥಳಕ್ಕೆ ಸರಿಸುತ್ತಿರುವ ಈ ದೃಶ್ಯ ನೂರಾರು ಜನರಲ್ಲಿ ತೀವ್ರ ಸಂವೇದನೆ ಉಂಟುಮಾಡಿದೆ.