Saval TV on YouTube
ಕೊಪ್ಪಳ: ಪ್ರೀತಿ ನಿರಾಕರಿಸಿದ ಪ್ರೇಯಸಿಯನ್ನು ಕೊಂದ ಪ್ರಿಯಕರ ತಾನೂ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕೊಪ್ಪಳದಲ್ಲಿ ನಡೆದಿದೆ.
ಕೊಪ್ಪಳ ಜಿಲ್ಲೆ ಬಳಗೇರಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಪ್ರಕಾಶ್ ಎಂಬಾತನೇ ತನ್ನ ಪ್ರೇಯಸಿ ಸುಮಾಳನ್ನು ಹತ್ಯೆಗೈದಿದ್ದಾನೆ. ಬಳಿಕ ತಾನೂ ಆತ್ಮಹತ್ಯೆಗೆ ಶರಣಾಗಿದ್ದಾನೆ.
ಇಬ್ಬರು ಹಲವು ದಿನಗಳಿಂದ ಪ್ರೀತಿಸುತ್ತಿದ್ದರು. ಈ ಮಧ್ಯೆ ಪ್ರೀತಿಗೆ ಪೋಷಕರು ವಿರೋಧಿಸಿದ ಹಿನ್ನೆಲೆ ಸುಮಾ ಪ್ರೀತಿ ನಿರಾಕರಿಸಿದ್ದಳು. ಈ ಹಿನ್ನೆಲೆಯಲ್ಲಿ ಇಂದು ಯುವತಿ ಮನೆಯಲ್ಲೇ ಆಕೆಯನ್ನು ಪ್ರಕಾಶ್ ಹತ್ಯೆ ಮಾಡಿ ಬಳಿಕ ತಾನೂ ಆತ್ಮಹತ್ಯೆಗೆ ಶರಣಾಗಿದ್ದಾನೆ ಎನ್ನಲಾಗಿದೆ.
ಸ್ಥಳಕ್ಕೆ ಕುಕನೂರು ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.