ಹಲಗೂರು: ಈಜಲು ಹೋಗಿ ಯುವಕ ಮೃತಪಟ್ಟ ಘಟನೆ ಮಳವಳ್ಳಿ ತಾಲೂಕಿನ ಮುತ್ತತ್ತಿ ಬಳಿಯ ಕಾವೇರಿ ನದಿಯಲ್ಲಿ ನಡೆದಿದೆ.
ವಿಶ್ವಾಸ್(27) ಮೃತ ದುರ್ದೈವಿ. ಬೆಂಗಳೂರಿನ ನಾಯಂಡಹಳ್ಳಿ ಮೂಲದ ವಿಶ್ವಾಸ್ ತನ್ನ ಸ್ನೇಹಿತರೊಂದಿಗೆ ಮುತ್ತತ್ತಿಯ ಮುತ್ತತ್ತಿರಾಯನ ದರ್ಶನಕ್ಕೆ ಬಂದಿದ್ದ.ದೇವರ ದರ್ಶನಕ್ಕೂ ಮೊದಲು ಸ್ನೇಹಿತರೆಲ್ಲರು ಕಾವೇರಿ ನದಿಯಲ್ಲಿ ಈಜಲು ಹೋಗಿದ್ದರು.
ಈ ವೇಳೆ ಕಾವೇರಿ ನದಿಯಲ್ಲಿ ಮುಳುಗಿ ವಿಶ್ವಾಸ್ ಮೃತಪಟ್ಟಿದ್ದಾನೆ. ವಿಶ್ವಾಸ್ ಮೃತ ದೇಹಕ್ಕಾಗಿ ನದಿಯಲ್ಲಿ ಹುಡುಕಾಟ ನಡೆಸಲಾಗುತ್ತಿದೆ. ಹಲಗೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ
Saval TV on YouTube