ಮೈಸೂರು: ನಗರದ ಜಗನ್ಮೋಹನ ಪ್ಯಾಲೇಸ್ ಬಳಿ ಇರುವ ಮೊಬೈಲ್ ಅಂಗಡಿಗೆ ನುಗ್ಗಿ ಕೆಲಸ ಮಾಡುತ್ತಿದ್ದ ಯುವಕನ ಮೇಲೆ ಹಲ್ಲೆ ನಡೆಸಿರುವ ಘಟನೆ ವರದಿಯಾಗಿದೆ.
ಯುವಕನ ಪುಂಡಾಟದ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಅಂಗಡಿಗೆ ನುಗ್ಗಿ ಯುವಕ ಹಲ್ಲೆ ಮಾಡಿದ್ದು, ಇದೇ ವೇಳೆ ಮತ್ತೊಬ್ಬ ವ್ಯಕ್ತಿ ತಡೆಯುವ ಯತ್ನ ಮಾಡಿದ್ದಾನೆ. ಎಷ್ಟೆ ತಡೆದರು ಮತ್ತೆ ಅಂಗಡಿಯೊಳಗೆ ನುಗ್ಗಿ ಯುವಕ ಹಲ್ಲೆ ಮಾಡಿದ್ದಾನೆ.
ಮೈಸೂರಿನ ದೇವರಾಜ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
Saval TV on YouTube