ಮನೆ ಅಪರಾಧ ರಕ್ತದ ಮಡುವಿನಲ್ಲಿ ಯುವಕ ಪತ್ತೆ: ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಸಾವು- ವಾಮಾಚಾರ ಮಾಡಿ ಕೊಲೆ...

ರಕ್ತದ ಮಡುವಿನಲ್ಲಿ ಯುವಕ ಪತ್ತೆ: ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಸಾವು- ವಾಮಾಚಾರ ಮಾಡಿ ಕೊಲೆ ಶಂಕೆ

0

ನಂಜನಗೂಡು: ನಂಜನಗೂಡು ತಾಲೂಕಿನ ಮಡುವಿನಹಳ್ಳಿ ಗ್ರಾಮದ ಸರ್ಕಾರಿ ಪ್ರೌಢಶಾಲೆ ಸಮೀಪ ಕತ್ತು ಕೊಯ್ದ ನರಳಾಡುತ್ತಿದ್ದ ವ್ಯಕ್ತಿಯನ್ನು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಮೃತಪಟ್ಟಿದ್ದಾನೆ.

Join Our Whatsapp Group

ಮಾಲ್ಕುಂಡಿ ಗ್ರಾಮದ ಸದಾಶಿವ(43) ಮೃತ ವ್ಯಕ್ತಿ.

ಇದರ ಕುರುಹಾಗಿ ಸ್ಥಳದಲ್ಲಿ ಮಂತ್ರಿಸಿರುವ ನಿಂಬೆಹಣ್ಣು,101 ರೂ ನಗದು,ಎಲೆ ಅಡಿಕೆ ಕಂಡುಬಂದಿದ್ದು, ಹುಣ್ಣಿಮೆ ಹಿನ್ನಲೆ ವಾಮಾಚಾರ ನಡೆಸಿ ಕೊಲೆ ಮಾಡಿರಬಹುದೆಂಬ ಶಂಕೆ ವ್ಯಕ್ತವಾಗಿದೆ.

ಪ್ರೌಢ ಶಾಲೆಯ ಸಮೀಪ ನೀರು ಹರಿಯುವ ಹಳ್ಳದಲ್ಲಿ ನರಳಾಡುತ್ತಿದ್ದ ದೃಶ್ಯ ಸ್ಥಳೀಯರೊಬ್ಬರ ಕಣ್ಣಿಗೆ ಬಿದ್ದಿದೆ. ನಂತರ ಹುಲ್ಲಹಳ್ಳಿ ಠಾಣೆಗೆ ಮಾಹಿತಿ ನೀಡಿದ್ದಾರೆ.

ಪಿಎಸ್ ಐ ಚೇತನ್ ಕುಮಾರ್ ತಮ್ಮ ಸಿಬ್ಬಂದಿಗಳ ಜೊತೆ ಸ್ಥಳಕ್ಕೆ ಆಗಮಿಸಿ ನರಳಾಡುತ್ತಿದ್ದ ಸದಾಶಿವ ನನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ.ಆದರೆ ಮಾರ್ಗಮಧ್ಯೆ ಸದಾಶಿವ ಸಾವನ್ನಪ್ಪಿದ್ದಾರೆ.