ಬೆಂಗಳೂರು : ಸಿನಿಮಾ ಸ್ಟೈಲ್ನಲ್ಲಿ ಯುವಕನನ್ನ ಅಡ್ಡಗಟ್ಟಿ ದರೋಡೆ ಮಾಡಿರುವ ಘಟನೆ ಬೆಂಗಳೂರಿನ ಬನ್ನೇರುಘಟ್ಟ ಪೊಲೀಸ್ ಠಾಣಾ ವ್ಯಾಪ್ತಿಯ ಸಕಲವಾರ ರಸ್ತೆಯಲ್ಲಿ ನಡೆದಿದೆ. ಯುವಕನ ಬೈಕ್ ಸಮೇತ 31 ಲಕ್ಷದ 38 ಸಾವಿರ ರೂ. ದರೋಡೆ ಮಾಡಲಾಗಿದೆ. ಹಾಡಹಗಲೇ ಲಾಂಗ್ನಿಂದ ಹಲ್ಲೆ ನಡೆಸಿ ಕೈಚಳಕ ತೋರಿಸಿದ್ದಾರೆ. ದರೋಡೆಯ ಬೆಚ್ಚಿ ಬೀಳಿಸೋ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ದರೋಡೆ ಪ್ರಕರಣ ನಡೆದಿದೆ. ಕೈಲಾಸ್ ಎಂಬ ಯುವಕನ ಬೈಕ್ ಅಡ್ಡಗಟ್ಟಿ ದರೋಡೆ ಮಾಡಲಾಗಿದೆ.
ರಾಕೇಶ್ ಎಂಬುವವರ ಬಳಿ ಕ್ಯಾಷ್ ಪೀಕಪ್ ಕೆಲಸ ಮಾಡಿಕೊಂಡಿದ್ದ ಕೈಲಾಸ್ ಬೈಕ್ ನಲ್ಲಿ ತೆರಳಿ ಉಡಾನ್ ಕಂಪನಿಯ ಬ್ರ್ಯಾಂಚ್ಗಳಲ್ಲಿ ಹಣ ಕಲೆಕ್ಟ್ ಮಾಡಿಕೊಂಡಿದ್ದ. ನಿನ್ನೇಯು ಸಹ ಉಡಾನ್ ಬ್ಯಾಂಚ್ಗಳಲ್ಲಿ ಹಣ ಕಲೆಕ್ಟ್ ಮಾಡಿ ಜೂಪಿಟರ್ ಬೈಕ್ ಡಿಕ್ಕಿಯಲ್ಲಿ ಇಟ್ಟುಕೊಂಡಿದ್ದ. ಬೈಕ್ನಲ್ಲಿ ಸಕಲವಾರ ಕಡೆಯಿಂದ ಬನ್ನೇರುಘಟ್ಟ ರಸ್ತೆ ಕಡೆಗೆ ಬರುವಾಗ ಎರಡು ಬೈಕ್ನಲ್ಲಿ ಬಂದಿದ್ದ ನಾಲ್ವರು ಕೃತ್ಯ ಎಸಗಿದ್ದಾರೆ. ಈ ಸಂಬಂಧ ಬನ್ನೇರುಘಟ್ಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇತ್ತೀಚೆಗೆ ಗಾಳಿಪಟದ ದಾರದಿಂದ ಆಗುವ ಅನಾಹುಗಳು ಹೆಚ್ಚಾಗುತ್ತಿದೆ. ಇಂದು ಕೂಡ ಅಂತಹದ್ದೇ ಮತ್ತೊಂದು ಘಟನೆ ನಡೆದಿದೆ. ಬೈಕ್ಗೆ ತಗುಲಿದ ಗಾಳಿಪಟ ದಾರ ಬಿಡಿಸಲು ಹೋದ ಪಾದಚಾರಿ ಕಾಲಿಗೆ ಗಂಭೀರ ಗಾಯಗೊಂಡಿರುವ ಘಟನೆ ಆರ್ಟಿ ನಗರದಲ್ಲಿ ನಡೆದಿದೆ. ಬೈಕ್ ಸವಾರನ ಬೈಕ್ಗೆ ದಾರ ಸಿಲುಕಿತ್ತು.
ಇದನ್ನು ನಾಗರಾಜ್ ಎಂಬ ಪಾದಚಾರಿ ಬಿಡಿಸಲು ಹೋಗಿದ್ದಾನೆ. ಇದೇ ವೇಳೆ ಕಾರು ಬಂದಿದ್ದು ದಾರವನ್ನ ಎಳೆದುಕೊಂಡು ಹೋಗಿದೆ. ಪರಿಣಾಮ ಆ ದಾರ ಪಾದಚಾರಿಯ ಕಾಲಿಗೆ ತಗುಲಿ ಕಾಲಿನ ಮೂರು ನರ ಕಟ್ ಆಗಿದೆ. ಬಿಜಿಎ ಘನತ್ಯಾಜ್ಯ ನಿರ್ವಹಣಾ ಘಟಕದಲ್ಲಿ ಕಸದ ಆಟೋ ಚಾಲಕನಾಗಿರುವ ನಾಗಾರ್ಜುನ್ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ವರದಿಯಾಗಿದೆ.















