ಮನೆ ಅಪರಾಧ ದೆಹಲಿಯ ಜಾಮಾ ಮಸೀದಿ ಬಳಿ ಗುಂಡು ಹಾರಿಸಿ ಯುವಕನ ಹತ್ಯೆ

ದೆಹಲಿಯ ಜಾಮಾ ಮಸೀದಿ ಬಳಿ ಗುಂಡು ಹಾರಿಸಿ ಯುವಕನ ಹತ್ಯೆ

0
ಸಾಂದರ್ಭಿಕ ಚಿತ್ರ

ದೆಹಲಿ: ದೆಹಲಿಯ ಜಾಮಾ ಮಸೀದಿ ಬಳಿ ದುಷ್ಕರ್ಮಿಗಳು ಗುಂಡು ಹಾರಿಸಿ ಯುವಕನನ್ನು ಹತ್ಯೆ ಮಾಡಿರುವ ಘಟನೆ ಬುಧವಾರ ರಾತ್ರಿ ನಡೆದಿದೆ.

Join Our Whatsapp Group

ಅವರು ಚಾವ್ರಿ ಬಜಾರ್ ನಿವಾಸಿ ಸಮೀರ್ ಎಂದು ಗುರುತಿಸಲಾಗಿದೆ.

ಈ ಸಂಬಂಧ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ.

ಮಸೀದಿಯ ಗೇಟ್​ ನಂಬರ್ 1ರ ಬಳಿ ಹಲವು ಸುತ್ತು ಗುಂಡು ಹಾರಿಸಲಾಗಿದೆ. ಈ ಗುಂಡಿನ ದಾಳಿಯಲ್ಲಿ ಸಮೀರ್​ ಗೆ ಗುಂಡು ತಗುಲಿದೆ. ಸಮೀರ್ ಆ ಪ್ರದೇಶದ ಹೋಟೆಲ್​ ವೊಂದರಲ್ಲಿ ಕೆಲಸ ಮಾಡುತ್ತಿದ್ದರು, ಕೆಲವು ಕಿಡಿಗೇಡಿಗಳು ಹೋಟೆಲ್ ಮಾಲೀಕನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ.

ಈ ಜಗಳದ ವೇಳೆ ಸಮೀರ್ ಮಧ್ಯ ಪ್ರವೇಶಿಸಿದ್ದರು, ಆದರೆ ದುಷ್ಕರ್ಮಿಗಳು ಅಲ್ಲಿಯೇ ಗುಂಡು ಹಾರಿಸಲು ಶುರು ಮಾಡಿದ್ದರು. ಗಾಯಗೊಂಡಿದ್ದ ಸಮೀರ್ ​ನನ್ನು ಜಯಪ್ರಕಾಶ್ ನಾರಾಯಣ್ ಆಸ್ಪತ್ರೆಗೆ ದಾಖಲಿಸಲಾಯಿತು. ಅಲ್ಲಿ ವೈದ್ಯರು ಮೃತಪಟ್ಟಿರುವುದಾಗಿ ಘೋಷಿಸಿದರು.

ಹಲವು ಸುತ್ತುಗಳ ಗುಂಡು ಹಾರಿಸಿ ದುಷ್ಕರ್ಮಿಗಳು ಅಲ್ಲಿಂದ ಪರಾರಿಯಾಗಿದ್ದಾರೆ.

ಹಿಂದಿನ ಲೇಖನಸಿದ್ದರಾಮಯ್ಯ ರಾಜ್ಯದ ನೂತನ ಸಿಎಂ: ಎಐಸಿಸಿಯಿಂದ ಅಧಿಕೃತ ಘೋಷಣೆ
ಮುಂದಿನ ಲೇಖನIPL 2023: ಪಂಜಾಬ್ ಪಂಜಾಬ್ ಕಿಂಗ್ಸ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್‌ ಗೆ ಭರ್ಜರಿ ಜಯ