ಮನೆ ರಾಜ್ಯ ಬಲ್ಲಾಳರಾಯನ ದುರ್ಗ, ಬಂಡಾಜೆ ಫಾಲ್ಸ್ ಚಾರಣಕ್ಕೆ ಬಂದು ನಾಪತ್ತೆಯಾಗಿದ್ದ ಯುವಕ ಪತ್ತೆ

ಬಲ್ಲಾಳರಾಯನ ದುರ್ಗ, ಬಂಡಾಜೆ ಫಾಲ್ಸ್ ಚಾರಣಕ್ಕೆ ಬಂದು ನಾಪತ್ತೆಯಾಗಿದ್ದ ಯುವಕ ಪತ್ತೆ

0

ಮೂಡಿಗೆರೆ: ಬಾಳೂರು ಠಾಣಾ ವ್ಯಾಪ್ತಿಯ ಬಲ್ಲಾಳ ರಾಯ ದುರ್ಗ ಹಾಗೂ ಭಂಡಾಜೆ ಫಾಲ್ಸ್ ಗೆ ಚಾರಣಕ್ಕೆ ಹೋಗಿ ನಾಪತ್ತೆಯಾಗಿದ್ದ ಯುವಕನನ್ನು ಪತ್ತೆ ಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಭಾನುವಾರ ಮುಂಜಾನೆ ಯುವಕರ ತಂಡವೊಂದು ಭಂಡಾಜೆ ಫಾಲ್ಸ್ ನೋಡಲು ತಂಡ ಹೊರಟಿತ್ತು. ಅದರಂತೆ ತಂಡದ ಸದಸ್ಯರು ಚಾರಣ ಕೈಗೊಂಡು ಹಿಂತಿರುಗುವ ವೇಳೆ ತಂಡದಲ್ಲಿ ಓರ್ವನಾದ ಧನುಷ್ ಎಂಬಾತ ನಾಪತ್ತೆಯಾಗಿದ್ದ. ಇದರಿಂದ ಗಾಬರಿಗೊಂಡ ಜೊತೆಗಿದ್ದ ಯುವಕರು ಆತನ ಮೊಬೈಲ್ ಗೆ ಕರೆ ಮಾಡಿದರೆ ನೆಟ್ ವರ್ಕ್ ಇರಲಿಲ್ಲ ಕೂಡಲೇ ಯುವಕರು ನಡೆದುಕೊಂಡು ಸುಂಕ ಸಾಲೆ ಗ್ರಾಮಕ್ಕೆ ಬಂದು ಅಲ್ಲಿಂದ ಆತನ ಮೊಬೈಲ್ ಗೆ ಕರೆ ಮಾಡಿದರೆ ಆತನ ಮೊಬೈಲ್ ಸ್ವಿಚ್ ಆಫ್ ಆಗಿತ್ತು. ಬಳಿಕ ಎಚ್ಚೆತ್ತ ಯುವಕರು ಕೂಡಲೇ 112 ಗೆ ಕರೆ ಮಾಡಿ ಯುವಕ ನಾಪತ್ತೆಯಾಗಿರುವ ವಿಚಾರ ಪೊಲೀಸರಿಗೆ ತಿಳಿಸಿದ್ದಾರೆ.

ಮಾಹಿತಿ ಪಡೆದುಕೊಂಡ ಪೊಲೀಸರ ತಂಡ ಧನುಷ್ ಪತ್ತೆ ಕಾರ್ಯಕ್ಕೆ ಮುಂದಾಗಿದ್ದಾರೆ. ಅದರಂತೆ ಧನುಷ್ ನಾಪತ್ತೆಯಾದ ಸ್ಥಳದಿಂದ ಪೊಲೀಸರು ಮೂರೂ ತಂಡ ರಚಿಸಿ ಪತ್ತೆ ಕಾರ್ಯಕ್ಕೆ ಮುಂದಾಗಿದ್ದಾರೆ. ಬರೋಬ್ಬರಿ ಮೂರೂ ಗಂಟೆ ಮೂವತ್ತು ನಿಮಿಷಗಳ ಕಾರ್ಯಾಚರಣೆ ಬಳಿಕ ಧನುಷ್ ದಟ್ಟ ಕಾಡಿನ ನಡುವೆ ಪತ್ತೆಯಾಗಿದ್ದಾನೆ.

ಈ ಕುರಿತು ಮಾಹಿತಿ ನೀಡಿದ ಅಧಿಕಾರಿಗಳು ಧನುಷ್ ನಾಪತ್ತೆಯಾದ ಸ್ಥಳದಿಂದ ಆತನ ಪತ್ತೆಗೆ ಕಾರ್ಯಾಚರಣೆ ನಡೆಸಿ ಕಾಡಿನ ನಡುವೆ ಹುಡುಕಾಟ ನಡೆಸಿದ ನಮಗೆ ಸುಮಾರು ಮೂರುವರೆ ಗಂಟೆಗಳ ಕಾರ್ಯಾಚರಣೆ ಬಳಿಕ ಸುಮಾರು 700 ಅಡಿ ಕೆಳಗೆ ದಟ್ಟವಾದ ಅರಣ್ಯ ಪ್ರದೇಶದ ಮದ್ಯದಲ್ಲಿ ಒಬ್ಬನೇ ನಿಂತಿರುವುದು ಕಂಡು ಬಂದಿದೆ. ಕೂಡಲೇ ನಮ್ಮ ತಂಡ ಆತನ ಬಳಿಗೆ ಹೋಗುತ್ತಿದ್ದಂತೆ ಗಾಬರಿಗೊಂಡಿದ್ದ ಯುವಕ ನಮ್ಮನ್ನು ನೋಡಿ ನಮ್ಮತ್ತ ಓಡಿ ಬಂದಿದ್ದಾನೆ.

ಬಳಿಕ ವಿಚಾರಿಸಿದ ವೇಳೆ ಆತನೇ ಎಂಬುದು ದೃಢವಾಗಿದ್ದು, ಬಳಿಕ ಗಾಬರಿಗೊಂಡಿದ್ದ ಆತನನ್ನು ಸಂತೈಸಿ ಬಳಿಕ ಯುವಕರನ್ನು ಕೊಟ್ಟಿಗೆಹಾರಕ್ಕೆ ಕರೆದುಕೊಂಡು ಬಂದು ಬಳಿಕ ಪೋಷಕರಿಗೆ ಕರೆ ಮಾಡಿ ಮಾತನಾಡಿಸಿ, ಆ ಬಳಿಕ ಮಂಗಳೂರಿಗೆ ಕಳುಹಿಸಿಕೊಡಲಾಯಿತು ಎಂದು ಹೇಳಿದ್ದಾರೆ.

ಕಾರ್ಯಾಚರಣೆಯಲ್ಲಿ ಪೊಲೀಸ್ ಸಿಬ್ಬಂದಿಗಳಾದ ಮೆಹಬೂಬ್ ಸಾಧನಿ ಶಂಕರ್ ಬೋವಿ ಹಾಗೂ ಸ್ಥಳೀಯರು ಜೊತೆಗಿದ್ದರು.