ಮನೆ ಅಪರಾಧ ಕುಡಿದ ಅಮಲಿನಲ್ಲಿ ಬಾಲಕಿ ಮೇಲೆ ಅತ್ಯಾಚಾರವೆಸಗಿ ಪರಾರಿಯಾದ ಯುವಕ

ಕುಡಿದ ಅಮಲಿನಲ್ಲಿ ಬಾಲಕಿ ಮೇಲೆ ಅತ್ಯಾಚಾರವೆಸಗಿ ಪರಾರಿಯಾದ ಯುವಕ

0

ತುಮಕೂರು: ಕುಡಿದ ಅಮಲಿನಲ್ಲಿ ಯುವಕನೋರ್ವ 6 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಮಾಡಿರುವ ಘಟನೆ  ತುಮಕೂರು ಜಿಲ್ಲೆ ಕೊರಟಗೆರೆ ಪಟ್ಟಣದಲ್ಲಿ ನಡೆದಿದೆ.

ಮನೆಯಲ್ಲಿ ಯಾರು ಇಲ್ಲದ ಸಮಯ ನೋಡಿ  ಮನೆಯ ಮುಂದೆ ಕುಂಟೆಬಿಲ್ಲೆ ಆಟವಾಡುತ್ತಿದ್ದ ಬಾಲಕಿಯನ್ನ ಎಳೆದೊಯ್ದು ಅತ್ಯಾಚಾರ ನಡಸಿದ್ದಾನೆ. ಬಾಲಕಿ ಕಿರುಚಿಕೊಂಡಿದನ್ನ ಕೇಳಿಸಿಕೊಂಡು ಅಕ್ಕ-ಪಕ್ಕದ  ಮನೆಯವರು ಓಡಿಬಂದಿದ್ದಾರೆ.

ಕೂಡಲೇ ಆರೋಪಿ ಐ.ಡಿ.ಹಳ್ಳಿ ಮೂಲದ ಪವನ್(23) ಸ್ಥಳದಿಂದ ಪರಾರಿಯಾಗಿದ್ದಾನೆ. ಆರೋಪಿ ಪವನ್ ಕೊರಟಗೆರೆ ಪಟ್ಟಣದ  ಹೊಟೇಲ್ ನಲ್ಲಿ ಕೆಲಸ ಮಾಡುತ್ತಿದ್ದ.

ಬಾಲಕಿಗೆ ಕೊರಟಗೆರೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ, ನಂತರ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ.

ಸ್ಥಳಕ್ಕೆ ಸಿಪಿಐ ಅನಿಲ್ ಮತ್ತು ಪಿಎಸ್ ಐ ಚೇತನ್ ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

ಹಿಂದಿನ ಲೇಖನಮಕ್ಕಳ ರಕ್ಷಣೆಗೆ ಪ್ರಬಲ ಆಧ್ಯತೆ ನೀಡಬೇಕು: ಪ್ರೊ. ಶರಣಪ್ಪ ವಿ. ಹಲ್ಸೆ
ಮುಂದಿನ ಲೇಖನಕಾಂಗ್ರೆಸ್ ಪಕ್ಷಕ್ಕೆ ಮಹಾತ್ಮ ಗಾಂಧಿ ಅವರ ತತ್ಪಾದರ್ಶಗಳೇ ದಾರಿದೀಪ: ಮುಖ್ಯಮಂತ್ರಿ ಸಿದ್ದರಾಮಯ್ಯ