ಮನೆ ಅಪರಾಧ 3 ತಿಂಗಳ ಹಿಂದೆ ಮದುವೆಯಾಗಿ ಊರಿಗೆ ವಾಪಸ್‌ ಆದ ಯುವಕನ ಹತ್ಯೆ

3 ತಿಂಗಳ ಹಿಂದೆ ಮದುವೆಯಾಗಿ ಊರಿಗೆ ವಾಪಸ್‌ ಆದ ಯುವಕನ ಹತ್ಯೆ

0

ಭರಮಸಾಗರ: ಊರು ತೊರೆದು ದೇಗುಲವೊಂದರಲ್ಲಿ ಮದುವೆಯಾಗಿ ಮೂರು ತಿಂಗಳ ಬಳಿಕ ಪ್ರೇಮಿಗಳು ಗ್ರಾಮಕ್ಕೆ ವಾಪಾಸ್ ಆಗುತ್ತಿದ್ದಂತೆ ಯುವತಿಯ ಪೋಷಕರು ಮದುಮಗನ ಮೇಲೆ ಹಲ್ಲೆ ನಡೆಸಿ, ದಾರುಣವಾಗಿ ಹತ್ಯೆ ಮಾಡಿರುವ ಘಟನೆ ನ.27ರ ಬುಧವಾರ ರಾತ್ರಿ ಕೋಣನೂರು ಗ್ರಾಮದಲ್ಲಿ ನಡೆದಿದೆ.

Join Our Whatsapp Group

ಮಂಜುನಾಥ್ ಮೃತ ಮದುಮಗ. ಘಟನೆಯಲ್ಲಿ ಮಂಜುನಾಥ್ ತಂದೆ ಚಂದ್ರಪ್ಪ, ತಾಯಿ ಅನುಸೂಯಮ್ಮ ಅವರಿಗೂ ಗಂಬೀರ ಗಾಯಗಳಾಗಿವೆ. ಗಾಯಾಳುಗಳನ್ನು  ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ.

ಮಂಜುನಾಥ್ ತಮ್ಮದೇ ಗ್ರಾಮದ, ತಾನು ಪ್ರೀತಿಸುತ್ತಿದ್ದ ರಕ್ಷಿತಾ ಎಂಬವಳೊಂದಿಗೆ  ಕಳೆದ 3 ತಿಂಗಳ ಹಿಂದೆ ಊರು ತೊರೆದು ದೇಗುಲವೊಂದರಲ್ಲಿ ವಿವಾಹವಾಗಿದ್ದರು. ಈ ಮದುವೆಗೆ ಯುವತಿಯ ಪೊಷಕರ ವಿರೋಧವಿತ್ತು.

ನ.28ರ ಬುಧವಾರ ಮಧ್ಯಾಹ್ನ ಊರಿಗೆ ಬಂದಿದ್ದ ಮಂಜುನಾಥ ಮತ್ತು ಆತನ ತಂದೆ-ತಾಯಿ ಮೇಲೆ ಕೂಡ 20ಕ್ಕೂ ಹೆಚ್ಚು ಜನ ಯುವತಿ ಕಡೆ ಪೋಷಕರು ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಹತ್ಯೆ ಬಳಿಕ ಆರೋಪಿಗಳು ತಲೆ ಮರೆಸಿಕೊಂಡಿದ್ದಾರೆ.

ಆಸ್ಪತ್ರೆಗೆ ಚಿತ್ರದುರ್ಗ ಎಸ್ಪಿ ರಂಜಿತ್ ಕುಮಾರ್ ಬಂಡಾರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಭರಮಸಾಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.