ಹಾವೇರಿ: ಪ್ರೀತಿಸಿದ ಹುಡುಗನಿಗಾಗಿ ನಿಶ್ಚಿತಾರ್ಥ ಮಾಡಿಕೊಂಡ ಯುವಕನಿಗೆ ಅಪ್ರಾಪ್ತ ಬಾಲಕಿ ಚಾಕು ಇರಿದಿರುವ ಘಟನೆ ಜಿಲ್ಲೆಯ ರಾಣೇಬೆನ್ನೂರು ಪಟ್ಟಣದ ಹೊರವಲಯದ ಓಂ ಪಬ್ಲಿಕ್ ಸ್ಕೂಲ್ ಬಳಿ ನಡೆದಿದೆ.
ಹರಪನಹಳ್ಳಿ ತಾಲೂಕಿನಲ್ಲಿ ಸೇಲ್ಸ್ ಮನ್ ಆಗಿ ಕೆಲಸ ಮಾಡುತ್ತಿದ್ದ ದೇವೆಂದ್ರಗೌಡ ಗಾಯಗೊಂಡ ಯುವಕ.
ನಡೆದಿದ್ದೇನು?:
ಅಪ್ರಾಪ್ತ ಬಾಲಕಿ ಭಾವಿ ಪತಿಗೆ ಪಾರ್ಕ್’ಗೆ ಕರೆದಿದ್ದಾಳೆ. ನಿನಗೆ ಒಂದು ಗಿಪ್ಟ್ ಕೊಡಬೇಕು ರೀಲ್ಸ್ ಮಾಡೋಣ ನಿನ್ನ ಕೈ ಕಟ್ಟಿ ಪೋಟೊ ತೆಗೆಯುತ್ತೇನೆ ಎಂದಿದ್ದು, ಯುವಕ ಕೂಡ ಪ್ರೀತಿಯಿಂದ ಹೇಳುತ್ತಿದ್ದಾಳೆ ಎಂದು ಒಪ್ಪಿದ್ದಾನೆ. ಇದಕ್ಕೆ ಒಪ್ಪಿಕೊಂಡು ಶಿಲುಬೆ ಥರ ಕೈ ಕಟ್ಟಿಸಿಕೊಂಡಿದ್ದ ಯುವಕನ ಕುತ್ತಿಗೆಗೆ ಅಪ್ರಾಪ್ತ ಬಾಲಕಿ ಚೂರಿ ಹಾಕಿದ್ದಾಳೆ.
ಗಂಭೀರವಾಗಿ ಗಾಯಗೊಂಡಿರುವ ಯುವಕನನ್ನ ದಾವಣಗೆರೆ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಯುವಕನ ಪೋಷಕರಿಂದ ಅಪ್ರಾಪ್ತ ಬಾಲಕಿಯ ಮೇಲೆ ದೂರು ಕೊಡಲಾಗಿದ್ದು, ಪ್ರಕರಣ ಗಂಭೀರ ಸ್ವರೂಪ ಪಡೆದ ಹಿನ್ನಲೆ ಆರೋಪಿ ಯುವತಿಯನ್ನು ಅರೆಸ್ಟ್ ಮಾಡಲಾಗಿದೆ.
ಈ ಕುರಿತು ಹಲಗೇರಿ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.