ಮನೆ ರಾಜ್ಯ ಪ್ರೀತಿಸಿದ ಯುವಕನಿಂದ ಮದುವೆಗೆ ನಿರಾಕರಣೆ – ನೇಣಿಗೆ ಶರಣಾದ ಯುವತಿ

ಪ್ರೀತಿಸಿದ ಯುವಕನಿಂದ ಮದುವೆಗೆ ನಿರಾಕರಣೆ – ನೇಣಿಗೆ ಶರಣಾದ ಯುವತಿ

0

ರಾಮನಗರ : ಪ್ರೀತಿಸಿದ ಯುವಕ ಮದುವೆಗೆ ನಿರಾಕರಿಸಿದ್ದಕ್ಕೆ, ಯುವತಿಯೊಬ್ಬಳು ನೇಣಿಗೆ ಶರಣಾದ ಘಟನೆ ರಾಮನಗರ ತಾಲೂಕಿನ ವಿಭೂತಿಕೆರೆ ಗ್ರಾಮದಲ್ಲಿ ನಡೆದಿದೆ. ನೇಣಿಗೆ ಶರಣಾದ ಯುವತಿಯನ್ನು ವರ್ಷಿಣಿ (22) ಎಂದು ಗುರುತಿಸಲಾಗಿದೆ.

ಯುವತಿ ಡೆತ್ ನೋಟ್ ಬರೆದಿಟ್ಟು, ಬಾನುವಾರ ರಾತ್ರಿ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಕಳೆದ ಎರಡು ವರ್ಷಗಳಿಂದ ವರ್ಷಿಣಿ ಹಾಗೂ ಯುವಕ ಪರಸ್ಪರ ಪ್ರೀತಿಸುತ್ತಿದ್ದರು. ಆತ ಮದುವೆಗೆ ನಿರಾಕರಿಸಿದ್ದಕ್ಕೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ರಾಮನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಯುವತಿಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ ಎಂದು ತಿಳಿದು ಬಂದಿದೆ.