ಬೆಂಗಳೂರು : ಪ್ರೀತಿಸಲು ನಿರಾಕರಿಸಿದ ಕಾರಣಕ್ಕೆ ವಿದ್ಯಾರ್ಥಿನಿಯ ಕತ್ತು ಕೊಯ್ದು ಕೊಲೆ ಮಾಡಿರುವ ಘಟನೆ ಗುರುವಾರದಂದು ಶ್ರೀರಾಂಪುರ ಪೊಲೀಸ್ ಠಾಣಾ ವ್ಯಾಪ್ತಿಯ ರೈಲ್ವೆ ಹಳಿಯ ಬಳಿ ನಡೆದಿದೆ.
ಪರೀಕ್ಷೆ ಬರೆದು ಕಾಲೇಜಿನಿಂದ ಬರ್ತಿದ್ದ ಯುವತಿಯನ್ನು ಬರ್ಬರವಾಗಿ ಕೊಲೆಗೈದಿದ್ದು, ಆರೋಪಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ. ತನಿಖೆ ವೇಳೆ ಪಾಗಲ್ ಪ್ರೇಮಿಯ ಹುಚ್ಚಾಟಗಳು ಬಯಲಾಗಿದೆ.
ಹಾಡಹಗಲೇ ಯುವತಿಯ ಕತ್ತು ಕೊಯ್ದು ಕೊಲೆಗೈದ ಭಗ್ನ ಪ್ರೇಮಿ ವಿಘ್ನೇಶ್ಗಾಗಿ ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದಾರೆ. ಇದೇ ವೇಳೆ ಯುವತಿ ಕೊಲೆ ತನಿಖೆಯನ್ನು ಕೂಡ ಪೊಲೀಸರು ತೀವ್ರಗೊಳಿಸಿದ್ದಾರೆ. ಆರು ತಿಂಗಳ ಹಿಂದೆಯೇ ವಿಘ್ನೇಶ್, ವಾಟ್ಸಾಪ್ ನಲ್ಲಿ ಮಿಷನ್ ಯಾಮಿನಿ ಪ್ರಿಯಾ ಎಂಬ ಹೆಸರಲ್ಲಿ ಗ್ರೂಪ್ ಕ್ರಿಯೇಟ್ ಮಾಡಿದ್ದ ಎಂದು ತನಿಖೆಯಲ್ಲಿ ತಿಳಿದುಬಂದಿದೆ.
ಈ ಗ್ರೂಪ್ನಲ್ಲಿ ಯಾಮಿನಿ ಪ್ರಿಯಾಳ ಸ್ನೇಹಿತರಿದ್ರು. ಆಕೆ ಕಾಲೇಜಿನಿಂದ ಮನೆಗೆ ಬರುವವರೆಗೂ ವಿಘ್ನೇಶ್ ಮಾಹಿತಿ ಕಲೆ ಹಾಕುತ್ತಿದ್ದ. ಅವಳನ್ನ ಟ್ರ್ಯಾಕ್ ಮಾಡಲೆಂದೆ ಈ ರೀತಿ ಗ್ರೂಪ್ ಮಾಡಿಕೊಂಡಿದ್ದ ಎನ್ನಲಾಗ್ತಿದೆ.















