ಮನೆ ಮನರಂಜನೆ “ಆಡುಜೀವಿತಂ’: ಪೃಥ್ವಿರಾಜ್‌ ಅಭಿನಯಕ್ಕೆ ಮೆಚ್ಚುಗೆ

“ಆಡುಜೀವಿತಂ’: ಪೃಥ್ವಿರಾಜ್‌ ಅಭಿನಯಕ್ಕೆ ಮೆಚ್ಚುಗೆ

0

ಕೊಚ್ಚಿ: ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕ ಬ್ಲೆಸ್ಸಿ ಅವರ ನಿರ್ದೇಶನದಲ್ಲಿ ಪೃಥ್ವಿರಾಜ್‌ ಸುಕುಮಾರನ್‌ ನಾಯಕರಾಗಿ ನಟಿಸಿರುವ “ಆಡುಜೀವಿತಂ’ʼ (ಗೋಟ್‌ ಲೈಫ್) ಸಿನಿಮಾ ಗುರುವಾರ (ಮಾ.28 ರಂದು) ವಿಶ್ವದೆಲ್ಲೆಡೆ ತೆರಕಂಡಿದೆ.

Join Our Whatsapp Group

ಸಿನಿಮಾಕ್ಕಾಗಿ ಸಾಕಷ್ಟು ತಯಾರಿ ನಡೆಸಿಕೊಂಡು, ಹಲವು ವರ್ಷಗಳ ಕಾಲ ಸ್ಕ್ರಿಪ್ಟ್‌ ಕೆಲಸದಲ್ಲಿ ತೊಡಗಿಕೊಂಡು ಶ್ರಮ ಹಾಕಿದ ಚಿತ್ರತಂಡ ಪ್ರೇಕ್ಷಕರ ಅಭಿಪ್ರಾಯಕ್ಕಾಗಿ ಕಾಯುತ್ತಿದೆ. ಮೊದಲ ದಿನವೇ ಸಿನಿಮಾಕ್ಕೆ ಭರ್ಜರಿ ರೆಸ್ಪಾನ್ಸ್‌ ವ್ಯಕ್ತವಾಗಿದೆ.

 “ಆಡುಜೀವಿತಂ’ʼ ಸಿನಿಮಾ ನೋಡಿದೆ. ಸಬ್‌ ಟೈಟಲ್‌ ಇಲ್ಲದೆ ನಿರಾಶೆ ಆಯಿತು. ಆದರೆ ಸಿನಿಮಾ ನೋಡಿದ ಬಳಿಕ ಸಿನಿಮಾದ ಭಾಷೆಯೂ ಸಾರ್ವತ್ರಿಕವಾಗಿರುತ್ತದೆ ಎಂದನಿಸಿತು. ಪೃಥ್ವಿರಾಜ್‌ ಸರ್‌ ನೀವು ನಿಜಕ್ಕೂ ʼಗ್ರೇಟಿಸ್ಟ್‌ ಆಫ್‌ ಆಲ್‌ ಟೈಮ್‌ʼ ಈ ಸಿನಿಮಾ ನೀಡಿದ ನಿಮಗೆ ಹಾಗೂ ಚಿತ್ರತಂಡಕ್ಕೆ ತಲೆಬಾಗುತ್ತೇನೆ” ಎಂದು ಒಬ್ಬರು ಬರೆದುಕೊಂಡಿದ್ದಾರೆ.

ʼಆಡುಜೀವಿತಂʼ ಬ್ಲೆಸ್ಸಿ ಅವರ ಮತ್ತೊಂದು ಕ್ಲಾಸಿಕ್ ಸಿನಿಮಾ ಆಗಿದೆ. ಪೃಥ್ವಿರಾಜ್ ಅವರ ಅದ್ಭುತ ಅಭಿನಯ, ರೋಚಕ ದೃಶ್ಯಗಳು, ಅತ್ಯುತ್ತಮ ಸಂಗೀತ, ಬೆರಗುಗೊಳಿಸುವ ಧ್ವನಿ ವಿನ್ಯಾಸ ಒಟ್ಟಾರೆಯಾಗಿ ಇದೊಂದು ನೋಡಲೇಬೇಕಾದ ಥಿಯೇಟರ್ ಅನುಭವದ ಚಿತ್ರವಾಗಿದೆ. ಹ್ಯಾಟ್ಸ್‌ ಆಫ್‌ ಯೂ ಎಂದು ಮತ್ತೊಬ್ಬರು ಬರೆದುಕೊಂಡಿದ್ದಾರೆ.

 “ಈ ಸಿನಿಮಾ ನೋಡಿದ ಬಳಿಕ ನನ್ನಲ್ಲಿ ಮಾತುಗಳೇ ಉಳಿದಿಲ್ಲ. ಸುಮ್ಮನೇ ವೀಕ್ಷಿಸಿ. ಈ ಸಿನಿಮಾ ಯಾವ G.O.A.T ಗಿಂತ ಕಡಿಮೆಯೇನಲ್ಲ, ಬ್ಲೆಸ್ಸಿ, ಪೃಥ್ವಿ, ಗೋಕುಲ್, ರೆಹಮಾನ್, ರೆಸೂಲ್ ನಿಮಗೆ ಶರಣು ಎಂದು ಒಬ್ಬರು ಬರೆದುಕೊಂಡಿದ್ದಾರೆ.

“ಒಂದು ಗಮನಾರ್ಹ ಸಿನಿಮಾ ಅನುಭವ!! ತಾಂತ್ರಿಕ ಶ್ರೇಷ್ಠತೆಯನ್ನು ಪ್ರದರ್ಶಿಸುವ ಉನ್ನತ ಶ್ರೇಣಿಯ ಮಲಯಾಳಂ ಚಲನಚಿತ್ರಗಳಲ್ಲಿ ಈ ಸಿನಿಮಾ ಒಂದಾಗಿದೆ. ಮಧ್ಯಂತರದ ನಂತರ, ಮಾಲಿವುಡ್‌ನಲ್ಲಿ ಹೊಸ ಮಾನದಂಡವನ್ನು ಹೊಂದಿಸುವ ಎರಡು-ನಿಮಿಷದ ವಿಭಾಗವಿದೆ ಅದಕ್ಕಾಗಿ ಬ್ಲೆಸ್ಸಿ ಮತ್ತು ಪೃಥ್ವಿರಾಜ್ ಅವರಿಗೆ ಅಭಿನಂದನೆಗಳು” ಎಂದು ಒಬ್ಬರು ಬರೆದುಕೊಂಡಿದ್ದಾರೆ.

ಒಂದು ಅಭಿನಯವು ಕಲ್ಪನೆಗಳನ್ನು ಮೀರಿ ಹೋದಾಗ, ಯಾರಾದರೂ ಕೇವಲ ನೋಟದಿಂದ ಮಾತ್ರವಲ್ಲದೆ ಅವರು ನಿರ್ವಹಿಸುವ ರೀತಿಯಿಂದಲೂ ಸವಾಲಿನ ಪಾತ್ರವಾಗಿ ರೂಪಾಂತರಗೊಳ್ಳುವುದನ್ನು ನೋಡಿದಾಗ, ನಟನೆಯು ಸಿನಿಮಾ ಮತ್ತು ಸುತ್ತಮುತ್ತಲಿನ ಎಲ್ಲವನ್ನೂ ಮೀರಿಸುತ್ತದೆ. ಆಡುಜೀವಿತಂ ಸುಂದರವಾಗಿದೆ. ಪೃಥ್ವಿರಾಜ್ ಸುಕುಮಾರನ್ ನೀವು G.O.A.T ಎಂದು ಮತ್ತೊಬ್ಬರು ಅಭಿಪ್ರಾಯವನ್ನು ಬರೆದುಕೊಂಡಿದ್ದಾರೆ.

“ಪೃಥ್ವಿರಾಜ್‌ ಅವರು ಅಭಿನಯ ಅತ್ಯದ್ಭುತ.  ಅವರು ನಜೀಬ್‌ ನಜೀಬ್ ಮೊಹಮ್ಮದ್ ಆಗಿ ಜೀವಿಸಿದ್ದಾರೆ. ಜೀವಮಾನದ ಪಾತ್ರ. ಅವರು ಎಲ್ಲ ಪ್ರಶಸ್ತಿಗೂ ಅರ್ಹರು” ಎಂದು ನೆಟ್ಟಿಗರೊಬ್ಬರು ಕೊಂಡಾಡಿದ್ದಾರೆ.

ಅದ್ಭುತ ಸಿನಿಮಾ. ಹೈಪ್‌ ಕೊಟ್ಟದ್ದಕ್ಕೆ ಸಾರ್ಥಕವಾಯಿತು. ಪೃಥ್ವಿರಾಜ್‌ ಅವರ ಅಭಿನಯದ ಟಾಪ್‌ ಆಗಿದೆ. ಅತ್ಯುತ್ತಮ ಚಲನಚಿತ್ರಗಳಲ್ಲಿ ಒಂದಾಗಿದೆ ಎಂದು ಒಬ್ಬರು ಹೇಳಿದ್ದಾರೆ.

ಮಲಯಾಳಂನ ಜನಪ್ರಿಯ ‘ಆಡುಜೀವಿತಂʼಕಾದಂಬರಿ ಆಧರಿಸಿ ಈ ಸಿನಿಮಾ ನಿರ್ಮಾಣ ಆಗಿದೆ. ಈ ಕಾದಂಬರಿ ವಿದೇಶಿ ಭಾಷೆ ಸೇರಿದಂತೆ 12 ಭಾಷೆಗಳಿಗೆ ಅನುವಾದಗೊಂಡಿದೆ. ಇದನ್ನು ಹೆಸರಾಂತ ಬರಹಗಾರ ಬೆನ್ಯಾಮಿನ್ ಅವರು ಬರೆದಿದ್ದಾರೆ.

ʼಆಡು ಜೀವಿತಂʼ ನಜೀಬ್ ಮೊಹಮ್ಮದ್ ಎನ್ನುವ ಕೇರಳದ ವ್ಯಕ್ತಿಯ ಕಥೆಯಾಗಿದೆ. ಈ ಪಾತ್ರವನ್ನು ಪೃಥ್ವಿರಾಜ್‌ ಮಾಡಿದ್ದಾರೆ. 90ರ ದಶಕದಲ್ಲಿ ಭವಿಷ್ಯ ಹುಡುಕಿಕೊಂಡು ಸೌದಿ ಅರೇಬಿಯಾಗೆ ಹೋಗುವ ನಜೀಬ್ ಪಾಸ್‌ಪೋರ್ಟ್‌ ಇಲ್ಲದೆ ಎದುರಿಸಿದ ಹಿಂಸೆ,  ಮರುಭೂಮಿ ಬಿಸಿಲಿನಲ್ಲಿ ಅನುಭವಿಸಿದ ಕಷ್ಟಗಳನ್ನು ಸಿನಿಮಾದಲ್ಲಿ ಹೇಳಲಾಗಿದೆ.

ಈ ಸಿನಿಮಾವನ್ನು ರಾಷ್ಟ್ರ ಪ್ರಶಸ್ತಿ ಪುರಸ್ಕೃತ​ ಬ್ಲೆಸ್ಸಿ ಥಾಮಸ್ ನಿರ್ದೇಶನ ಮಾಡಿದ್ದಾರೆ. ‘ವಿಷ್ಯುವಲ್​ ರೊಮ್ಯಾನ್ಸ್​ʼ ಸಿನಿಮಾವನ್ನು ನಿರ್ಮಾಣ ಮಾಡಿದ್ದು, ಎ.ಆರ್​. ರೆಹಮಾನ್ ಮ್ಯೂಸಿಕ್‌ ನೀಡಿದ್ದಾರೆ.

ಪೃಥಿರಾಜ್‌ ಜೊತೆ ಅಮಲಾ ಪೌಲ್​ , ಅರಬ್​ ನಟರಾದ ತಲಿಬ್​ ಅಲ್​ ಬಲುಶಿ, ರಿಕ್​ ಅಬಿ ನಟಿಸಿದ್ದು, ಹಾಲಿವುಡ್​ ನಟ ಜಿಮ್ಮಿ ಜೀನ್​ ಲೂಯಿಸ್​ ಕೂಡ ನಟಿಸಿದ್ದಾರೆ.