ಮನೆ ರಾಜ್ಯ ನಾಡಹಬ್ಬ ದಸರಾ: ಮರದ ಅಂಬಾರಿ ಹೊತ್ತ ಅಭಿಮನ್ಯು

ನಾಡಹಬ್ಬ ದಸರಾ: ಮರದ ಅಂಬಾರಿ ಹೊತ್ತ ಅಭಿಮನ್ಯು

0

ಮೈಸೂರು(Mysuru): ಜಗದ್ವಿಖ್ಯಾತ ನಾಡಹಬ್ಬ ದಸರಾ ಜಂಬೂಸವಾರಿಗೆ ದಿನಗಣನೆ ಆರಂಭವಾಗಿದ್ದು, ಸೋಮವಾರ ‘ಅಭಿಮನ್ಯು’ಗೆ ಮರದ ಅಂಬಾರಿ ಹೊರಿಸಿ, ತಾಲೀಮು ನಡೆಸಲಾಯಿತು.

ಅರಮನೆ ಆವರಣದಲ್ಲಿ ಡಿಸಿಎಫ್ ಡಾ.ವಿ.ಕರಿಕಾಳನ್ ಅವರು ‘ಅಭಿಮನ್ಯು’ ಜೊತೆ ಕುಮ್ಕಿ ಆನೆಗಳಾದ ‘ಚೈತ್ರಾ’, ‘ಕಾವೇರಿ’ಗೂ ಪೂಜೆ ಸಲ್ಲಿಸಿ ತಾಲೀಮಿಗೆ ಚಾಲನೆ ನೀಡಿದರು.

ಅರಮನೆಯ ಬಲರಾಮ ದ್ವಾರದಿಂದ ಬನ್ನಿಮಂಟಪದವರೆಗೆ ಮರದ ಅಂಬಾರಿ ಹೊತ್ತ ‘ಅಭಿಮನ್ಯು’ ಆನೆ ಗಾಂಭೀರ್ಯದಿಂದ ಹೆಜ್ಜೆ ಹಾಕಿದನು.

ಉಳಿದ ಆನೆಗಳಾದ ಧನಂಜಯ, ಗೋಪಾಲಸ್ವಾಮಿ, ಲಕ್ಷ್ಮಿ, ಮಹೇಂದ್ರ, ಭೀಮ, ಅರ್ಜುನ ಕೂಡ ನಡಿಗೆ ತಾಲೀಮಿನಲ್ಲಿ ಹೆಜ್ಜೆ ಹಾಕಿದವು.