ಮನೆ ಮನರಂಜನೆ ಅಭಿಷೇಕ್​ ಅಂಬರೀಷ್​-ಅವಿವಾ ಬಿದ್ದಪ್ಪ ಅದ್ದೂರಿ ವಿವಾಹ

ಅಭಿಷೇಕ್​ ಅಂಬರೀಷ್​-ಅವಿವಾ ಬಿದ್ದಪ್ಪ ಅದ್ದೂರಿ ವಿವಾಹ

0

ನಟ ಅಭಿಷೇಕ್​ ಅಂಬರೀಷ್​ ಅವರು ಇಂದು (ಜೂನ್​ 5) ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.

Join Our Whatsapp Group

ಬಹುಕಾಲದ ಗೆಳತಿ ಅವಿವಾ ಬಿದ್ದಪ್ಪ ಜೊತೆ ಅವರು ಸಪ್ತಪದಿ ತುಳಿದಿದ್ದಾರೆ. ಬೆಂಗಳೂರಿನಲ್ಲಿ ಈ ವಿವಾಹ ಸಮಾರಂಭ ಅದ್ದೂರಿಯಾಗಿ ನಡೆದಿದೆ. ದಕ್ಷಿಣ ಭಾರತ ಚಿತ್ರರಂಗದ ಅನೇಕ ಸೆಲೆಬ್ರಿಟಿಗಳು ಬಂದು ನವ ದಂಪತಿಗೆ ಅಭಿನಂದನೆ ತಿಳಿಸಿದ್ದಾರೆ.

ರಜನಿಕಾಂತ್​, ಮೋಹನ್​ ಬಾಬು, ಕಿಚ್ಚ ಸುದೀಪ್​, ಯಶ್​, ಅನಿಲ್​ ಕುಂಬ್ಳೆ, ಸುಹಾಸಿನಿ ಮಣಿರತ್ನಂ, ಪವಿತ್ರಾ ಲೋಕೇಶ್​, ನರೇಶ್​, ವೆಂಕಯ್ಯ ನಾಯ್ಡು, ಅಶ್ವಿನಿ ಪುನೀತ್​ ರಾಜ್​ಕುಮಾರ್​ ಮುಂತಾದವರು ಅಭಿಷೇಕ್​ ಅಂಬರೀಷ್​-ಅವಿವಾ ಬಿದ್ದಪ್ಪ ಮದುವೆಗೆ ಸಾಕ್ಷಿಯಾದರು.

 ‘ರೆಬೆಲ್​ ಸ್ಟಾರ್​’ ಅಂಬರೀಷ್​ ಮತ್ತು ಸುಮಲತಾ ಅಂಬರೀಷ್​ ಅವರು ಸಿನಿಮಾ ಹಾಗೂ ರಾಜಕೀಯ ಎರಡೂ ಕ್ಷೇತ್ರದಲ್ಲಿ ಹೆಸರು ಮಾಡಿದವರು. ಹಾಗಾಗಿ ಅವರಿಗೆ ಈ ಎರಡೂ ಕ್ಷೇತ್ರದಲ್ಲಿ ಸ್ನೇಹಿತರಿದ್ದಾರೆ.

ಬೆಂಗಳೂರಿನ ಮಾಣಿಕ್ಯ ಚಾಮರ ವಜ್ರದಲ್ಲಿ ಈ ಅದ್ದೂರಿ ಮದುವೆ ನಡೆದಿದೆ. ಮುಂಜಾನೆಯೇ ಸುಮಲತಾ ಕುಟುಂಬದವರು ಚಾಮರ ವಜ್ರಕ್ಕೆ ಆಗಮಿಸಿದರು.

ಅಭಿಷೇಕ್​ ಅವರು ಐಷಾರಾಮಿ ಕಾರಿನಲ್ಲಿ ಗ್ರ್ಯಾಂಡ್ ಆಗಿ ಎಂಟ್ರಿ ಕೊಟ್ಟರು. ಈ ವಿಡಿಯೋ ವೈರಲ್ ಆಗಿದೆ. ಒಕ್ಕಲಿಗರ ಸಮುದಾಯದಂತೆ ಮದುವೆ ಶಾಸ್ತ್ರಗಳು ನೆರವೇರಿವೆ.

ಮೇಘನಾ ರಾಜ್ ಕೂಡ ಆಗಮಿಸಿ, ಖುಷಿಖುಷಿಯಿಂದ ಮಾತನಾಡಿದ್ದಾರೆ. ‘ಅಂಬರೀಷ್ ಅಂಕಲ್ ನಮಗೆ ಕುಟುಂಬದವರು ಇದ್ದ ಹಾಗೆ. ಅಭಿಷೇಕ್ ಕೂಡ ನಮ್ಮ ಫ್ಯಾಮಿಲಿ. ಈಗ ಅವಿವಾ ಕೂಡ ನಮ್ಮ ಕುಟುಂಬ ಸೇರಿಕೊಂಡಿದ್ದಾರೆ. ತುಂಬಾ ಖುಷಿಯ ವಿಚಾರ. ಸೌತ್ ಇಂಡಿಯಾ ಸಿನಿಮಾ ಇಂಡಸ್ಟ್ರಿಗೆ ಸೆಲೆಬ್ರೇಷನ್ ಸಮಯ ಎಂದಿದ್ದಾರೆ ಮೇಘನಾ ರಾಜ್.

ಜೂನ್ 7ರಂದು ಬೆಂಗಳೂರಿನ ಪ್ಯಾಲೇಸ್​ ಗ್ರೌಂಡ್ ​ನಲ್ಲಿರುವ ತ್ರಿಪುರ ವಾಸಿನಿಯಲ್ಲಿ ಅದ್ದೂರಿಯಾಗಿ ಆರತಕ್ಷತೆ ನಡೆಯಲಿದೆ. ಅಂದು ಎಲ್ಲಾ ಸೆಲೆಬ್ರಿಟಿಗಳು ಭಾಗಿ ಆಗಿ ಔತಣ ಸ್ವೀಕರಿಸಲಿದ್ದಾರೆ.