ಮನೆ ಮನರಂಜನೆ ಅಭಿಷೇಕ್‌ ಅಂಬರೀಶ್‌ ನಟನೆಯ “ಬ್ಯಾಡ್‌ ಮ್ಯಾನರ್’ ಚಿತ್ರದ “ಓಗ ಓಗ’ ಹಾಡು ಬಿಡುಗಡೆ

ಅಭಿಷೇಕ್‌ ಅಂಬರೀಶ್‌ ನಟನೆಯ “ಬ್ಯಾಡ್‌ ಮ್ಯಾನರ್’ ಚಿತ್ರದ “ಓಗ ಓಗ’ ಹಾಡು ಬಿಡುಗಡೆ

0

ಸೂರಿ ನಿರ್ದೇಶನದ, ಅಭಿಷೇಕ್‌ ಅಂಬರೀಶ್‌ ನಾಯಕರಾಗಿರುವ “ಬ್ಯಾಡ್‌ ಮ್ಯಾನರ್’ ಚಿತ್ರದ “ಓಗ ಓಗ’ ಎಂಬ ಹಾಡು ಬಿಡುಗಡೆಯಾಗಿದೆ.

ಈಗಾಗಲೇ ಟೈಟಲ್‌ ಟ್ರ್ಯಾಕ್‌ ಹಾಗೂ ಸಾರಾಯಿ ಎಂಬ ಹಾಡು ರಿಲೀಸ್‌ ಆಗಿ ಹಿಟ್‌ಲಿಸ್ಟ್‌ ಸೇರಿದೆ. ಈಗ “ಓಗ ಓಗ’ ಸರದಿ. ಈ ಹಾಡು ಇಂದು ಬೆಳಗ್ಗೆ 11.04ಕ್ಕೆ ಆನಂದ್‌ ಆಡಿಯೋ ಯೂಟ್ಯೂಬ್‌ ನಲ್ಲಿ ರಿಲೀಸ್‌ ಆಗಿದೆ.

ಚರಣ್‌ ರಾಜ್‌ ಸಂಗೀತದ ಈ ಹಾಡನ್ನು ಕಪಿಲ್‌ ಕಪಿಲನ್‌ ಹಾಡಿದ್ದು, ಜಯಂತ್‌ ಕಾಯ್ಕಿಣಿ ಸಾಹಿತ್ಯವಿದೆ. ಸಂಗೀತ ನಿರ್ದೇಶಕ ಚರಣ್‌ ಹೇಳುವಂತೆ, ಓಗ ಓಗ ಎಂಬುದು ಗ್ರಿಬಿಶ್‌ ಪದವಂತೆ. ತುಂಬಾ ಸಂತೋಷವಾದಾಗ ಗುನುಗುವ ಪದ ಎನ್ನುತ್ತಾರೆ.

ಇನ್ನು, ಈ ಸಿನಿಮಾದಲ್ಲಿ ಅಭಿಷೇಕ್‌ ಆ್ಯಕ್ಷನ್‌ ಲುಕ್‌ ನಲ್ಲಿ ಕಾಣಿಸಿಕೊಂಡಿದ್ದು, ಈ ಸಿನಿಮಾ ಸಾಕಷ್ಟು ನಿರೀಕ್ಷೆ ಇಟ್ಟಿದ್ದಾರೆ. ಪಕ್ಕಾ ಸೂರಿ ಶೈಲಿಯ ಸಿನಿಮಾ ಇದಾಗಿದ್ದು, ಚಿತ್ರರಂಗ ಕೂಡಾ ಈ ಸಿನಿಮಾ ಮೇಲೆ ಒಂದು ಕಣ್ಣಿಟ್ಟಿದೆ. ಸುಧೀರ್‌ ಕೆ ಎಂ ಈ ಚಿತ್ರವನ್ನು ನಿರ್ಮಿಸಿದ್ದಾರೆ.

ಹಿಂದಿನ ಲೇಖನತಮಿಳುನಾಡಿಗೆ ಮತ್ತೆ 5000 ಕ್ಯೂಸೆಕ್ ನೀರು ಹರಿಸುವಂತೆ ಕರ್ನಾಟಕಕ್ಕೆ CWRC ಆದೇಶ
ಮುಂದಿನ ಲೇಖನಹೈಟೆಕ್ ಜಾನುವಾರು ಕಳ್ಳನ ಬಂಧನ: ಕದ್ದ ಹಸು, ಎಮ್ಮೆಗಳಿಂದಲೇ ಜಾನುವಾರು ಫಾರಂ ನಿರ್ಮಾಣ ಮಾಡಿದ್ದ ಭೂಪ