ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದು ಮಾಡಿದ ಕೇಂದ್ರ ಸರ್ಕಾರದ ನಿರ್ಧಾರ ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳ ತ್ವರಿತ ವಿಚಾರಣೆ ಕುರಿತು ಪರಿಗಣಿಸುವುದಾಗಿ ಸುಪ್ರೀಂ ಕೋರ್ಟ್ ಬುಧವಾರ ಹೇಳಿದೆ.
ಈ ಬಗ್ಗೆ ಪರಿಶೀಲಿಸಿ, ದಿನಾಂಕ ನಿಗದಪಡಿಸುವುದಾಗಿ ಸಿಜೆಐ ಡಿ.ವೈ.ಚಂದ್ರಚೂಡ್ ನೇತೃತ್ವದ ನ್ಯಾಯಪೀಠ ಹೇಳಿದೆ.
ಈ ಹಿಂದೆ ಏ.25 ಮತ್ತು ಸೆ.23ರಂದು ಅಂದಿನ ಸಿಜೆಐ ಎನ್.ವಿ.ರಮಣ ನೇತೃತ್ವದ ಪೀಠವೂ ಈ ಅರ್ಜಿಯನ್ನು ವಿಚಾರಣೆಗೆ ಲಿಸ್ಟ್ ಮಾಡುವುದಾಗಿ ಹೇಳಿತ್ತು. ಅರ್ಜಿಗಳನ್ನು ಆಲಿಸಿದ್ದ ಐವರು ನ್ಯಾಯಮೂರ್ತಿಗಳ ಪೀಠದ ಭಾಗವಾಗಿದ್ದ ನಿವೃತ್ತ ಸಿಜೆಐ ರಮಣ ಅವರು ನಿವೃತ್ತರಾಗಿರುವ ಕಾರಣ, ಈಗ ಸುಪ್ರೀಂ ಕೋರ್ಟ್ ಪೀಠವನ್ನು ಪುನಾರಚನೆ ಮಾಡಬೇಕಾಗಿದೆ.