ಚಿನ್ನ ತೂಗುವ ಬೀಜಕ್ಕೆ ಚಿನ್ನದಂತಹ ಅಪರಂಜಿ ಗುಣಗಳಿವೆ. ಕರಿ ಚುಕ್ಕೆಯುಳ್ಳ ನೆತ್ತರು ಕೆಂಪು ಬೀಜ ಮಾತ್ರ ವಿಷ. ಹಾಗಾಗಿ ಮಕ್ಕಳಿಂದ ದೂರವಿಡಬೇಕು. ಬಿಳಿ, ಕೆಂಪು ಎರಡು ಬಣ್ಣದ ಬೀಜಗಳಿವೆ. ಬಟಾಣಿ ಕಾಯಿ ಆಕಾರದ ಕಾಯಿ, ಸಂಯುಕ್ತ ಎಲೆಯ ಬಳ್ಳಿ, ಬಿಳಿ ಹೂ, ಬೇಲಿ, ಹುಲ್ಲು ಗಾವಲುಗಳಲ್ಲಿ ಕಂಡುಬರುವ ಭಾರಿ ಹಬ್ಬುಬಳ್ಳಿ.
ಎಲೆ ಮತ್ತು ಬೇರಿನಲ್ಲಿ ಸಿಹಿಯಾದ ಸಕ್ಕರೆ ಅಂಶವಿದೆ. ಗ್ಲೈಸರೈಸಿನ್ ಎಂಬ ರಾಸಾಯನಿಕ ಸತ್ವವಿದೆ. ಸ್ವರ ಬಿದ್ದಾಗ, ಬಾಯಿ ಹುಣ್ಣಾದಾಗ ಒಣ ಎಲೆ ಪುಡಿಮಾಡಿ ಜಗಿಯಬೇಕು. ಬೇರು ಅರೆದು ಸೇವಿಸಬಹುದು. ಗಾಯಮಾಯಿಸಲು ಹಚ್ಚಬಹುದು.
ಔಷಧೀಯ ಗುಣಗಳು :-
* ಕತ್ತಿನ ಪಕ್ಕದ ಗಂಟು, ಊತ ಪರಿಹರಿಸಲು ಇದರ ಬೇರನ್ನು ಅರೆದು ಅದರ ಲೇಪನವನ್ನು ಗಾಯದ ಸ್ಥಾನಕ್ಕೆ ಹಚ್ಚೂವುದರಿಂದ ಊತವು ಕಡಿಮೆಯಾಗುತ್ತದೆ.
* ಜಜ್ಜುಗಾಯ, ಕೂದಲು ಉದುರುವಿಕೆ ಪರಿಹರಿಸಲು ಇದರ ಬೀಜಗಳನ್ನು ಅರೆದು ಗಾಯದ ಜಾಗಕ್ಕೆ ಎಣ್ನೆಯ ಸಂಗಡ ಪಟ್ಟು ಹಾಕುವುದರಿಂದ ಜಜ್ಜುಗಾಯ ಮಾಯವಾಗುತ್ತದೆ. ಹಾಗೆಯೇ ತಲೆಗೆ ಎಣ್ಣೆಯ ಸಂಗಡ ಹಚ್ಚಿಕೊಳ್ಳುವುದರಿಂದ ತಲೆಗೂದಲು ಉದುರುವುದು ಕಡಿಮೆಯಾಗುತ್ತದೆ.
* ಬಾಯಿಯ ದರ್ವಾಸನೆ, ಬಾಯಿ ರುಚಿಯಿಲ್ಲದಿರುವುದನ್ನು ಹೋಗಲಾಡಿಸಲು ಬೀಡಾ ಜತೆ ಎಲೆ ಹಾಕಿ ತಿನ್ನುವುದರಿಂದ ಗಂಡಲಿಗೆ ಹಿತಕಾರಿ, ಬಾಯಿಯ ದಿಎದವಾಸನೆ ದೂರವಾಗುತ್ತದೆ, ಬಾಯಿ ರುಚಿ ಹೆಚ್ಚುತ್ತದೆ.
* ಎಲೆ ಮತ್ತು ಚಿತ್ರಮೂಲ ಬೇರು ಅರೆದು ಹಚ್ಚಿದರೆ ಚರ್ಮದ ಬಿಳಿಮಚ್ಚಡಯ ಕಲೆಗಳು ಮಾಯವಾಗುತ್ತದೆ.
* ಒಣ ಚರ್ಮ, ತುರಿಕೆ, ಕಜ್ಜಿ ಪರಿಹರಿಸಲು ಎಲೆಗಳನ್ನು ಅರೆದು ಹಚ್ಚುವುದರಿಂದ ತುರಿಕೆ, ಕಜ್ಜಿಗಳಲ್ಲಿ ಗುಣಕಾರಿಯಾಗಿದೆ.