ಮನೆ ಕಾನೂನು ಕೃಷ್ಣ ಬೈರೇಗೌಡ ಭೇಟಿ ವೇಳೆ ಕರ್ತವ್ಯಕ್ಕೆ ಗೈರು: ಓರ್ವ ಅಧಿಕಾರಿ ಅಮಾನತು, 11 ಜನರಿಗೆ ನೋಟಿಸ್

ಕೃಷ್ಣ ಬೈರೇಗೌಡ ಭೇಟಿ ವೇಳೆ ಕರ್ತವ್ಯಕ್ಕೆ ಗೈರು: ಓರ್ವ ಅಧಿಕಾರಿ ಅಮಾನತು, 11 ಜನರಿಗೆ ನೋಟಿಸ್

0

ಬೆಂಗಳೂರು: ಕಂದಾಯ ಸಚಿವ ಕೃಷ್ಣ ಭೈರೇಗೌಡ ಕಚೇರಿಗೆ ಭೇಟಿ ನೀಡಿದ್ದ ವೇಳೆ ಕರ್ತವ್ಯಕ್ಕೆ ಗೈರು ಹಾಜರಾಗಿದ್ದ ಬೆಂಗಳೂರು ಪೂರ್ವ ತಾಲೂಕು ತಹಶೀಲ್ದಾರ್​ ಕಚೇರಿಯ ದ್ವಿತೀಯ ದರ್ಜೆ ಸಹಾಯಕ ರಕ್ಷಿತ್​ ಅವರನ್ನು ಅಮಾನತು ಮಾಡಲಾಗಿದೆ.

Join Our Whatsapp Group

ಕಂದಾಯ ಸಚಿವ ಕೃಷ್ಣ ಭೈರೇಗೌಡ ಇಂದು (ಅ.30) ಬೆಳಗ್ಗೆ ಕೆ.ಆರ್.ಪುರಂ ತಾಲೂಕು ಕಚೇರಿಗೆ ‌ಭೇಟಿ ನೀಡಿದ್ದರು. ಈ ವೇಳೆ ಸಚಿವ ಕೃಷ್ಣ ಭೈರೇಗೌಡ ಕಚೇರಿಯಲ್ಲಿ ಸಿಬ್ಬಂದಿ ಹಾಜರಾತಿ ಪರಿಶೀಲಿಸಿದ್ದರು. ಈ ವೇಳೆ ದ್ವಿತೀಯ ದರ್ಜೆ ಸಹಾಯಕ ರಕ್ಷಿತ್ ಕಚೇರಿಗೆ ಗೈರು ಹಾಜರಾದ ವಿಚಾರ ತಿಳಿದು ಅವರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.

ಅಲ್ಲದೇ, ಕಚೇರಿಯ 11 ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಶೋಕಾಸ್ ನೋಟಿಸ್ ನೀಡಲಾಗಿದೆ. ವಿಶೇಷ ತಹಶೀಲ್ದಾರ್​ ಎಸ್​.ಆರ್​.ಮಹೇಶ್, ಗ್ರೇಡ್-2 ತಹಶೀಲ್ದಾರ್ ಆರ್​.ಶೇಖರ್, ತಹಶೀಲ್ದಾರ್ ಬಿ.ಎನ್.ರಾಜೀವ್, ಶಿರಸ್ತೆದಾರ ಅತೀಕ್​ ಜಮೀಲ್​ ಖಾನ್, ಶಿರಸ್ತೆದಾರ ಸಿ.ಚಂದ್ರಮ್ಮ, ಎಫ್​ಡಿಎಗಳಾದ ಕೆ.ಪ್ರವೀಣ್, ಎ.ಜ್ಞಾನಶೇಖರ್, ಎಸ್​ಡಿಎಗಳಾದ ಎನ್.ರಕ್ಷಿತ್, ಡಿ.ಬಾಲಕೃಷ್ಣ, ಗ್ರಾಮ ಆಡಳಿತಾಧಿಕಾರಿ ಲಕ್ಷ್ಮೀದೇವಿ, ಗ್ರೂಪ್ ಡಿ ಸಿಬ್ಬಂದಿ ಎನ್.ಆರ್.ಮಂಜುನಾಥ್​ ಅವರಿಗೆ ಬೆಂಗಳೂರು ನಗರ ಹೆಚ್ಚುವರಿ ಜಿಲ್ಲಾಧಿಕಾರಿಯಿಂದ ಶೋಕಾಸ್ ನೋಟಿಸ್ ನೀಡಿದ್ದಾರೆ.