ಮನೆ ಆರೋಗ್ಯ ಉರಿಯೂತ, ಅಲರ್ಜಿ ಮುಂತಾದ ಸಮಸ್ಯೆಗೆ ಎಕ್ಕೆ ಗಿಡದ ಮನೆಮದ್ದು

ಉರಿಯೂತ, ಅಲರ್ಜಿ ಮುಂತಾದ ಸಮಸ್ಯೆಗೆ ಎಕ್ಕೆ ಗಿಡದ ಮನೆಮದ್ದು

0

ಎಕ್ಕದ ಗಿಡವನ್ನು ಜೈಂಟ್ ಕ್ಯಾಲೋಟ್ರೋಪ್, ಇದನ್ನು ವೈಜ್ಞಾನಿಕವಾಗಿ ಕ್ಯಾಲೋಟ್ರೋಪಿಸ್ ಗಿಗಾಂಟಿಯಾ ಎಂದು ಕರೆಯಲಾಗುತ್ತಿದೆ.

Join Our Whatsapp Group

ಸಾಂಪ್ರದಾಯಿಕ ಔಷಧಿ ಪದ್ಧತಿಯಲ್ಲಿ ಎಕ್ಕದ ಗಿಡ ಜನಪ್ರಿಯ ಔಷಧಿ ಸಸ್ಯ ಎನಿಸಿಕೊಂಡಿದೆ. ಹೂವು ಗಿಡ ಎಲ್ಲವೂ ಔಷಧೀಯ ಗುಣಗಳನ್ನು ಹೊಂದಿದ್ದರೂ ಕೂಡ ಅದನ್ನು ಬಳಸುವಾಗ ಕೆಲವು ಮುನ್ನೆಚ್ಚರಿಕೆಯನ್ನು ವಹಿಸಬೇಕು ಇಲ್ಲವಾದರೆ ಆರೋಗ್ಯದ ಬದಲು ಅನಾರೋಗ್ಯದ ಸಮಸ್ಯೆ ಉಂಟಾಗಬಹುದು.

ಎಕ್ಕದ ರಸ ಅಥವಾ ಎಕ್ಕದ ಔಷಧವನ್ನು ಹೇಗೆ ತೆಗೆದುಕೊಳ್ಳಬೇಕು ಎಷ್ಟು ತೆಗೆದುಕೊಳ್ಳಬೇಕು ಎಂಬುದರ ಬಗ್ಗೆ ವೈದ್ಯರನ್ನ ಕೇಳಿ ತಿಳಿದುಕೊಳ್ಳಬೇಕು ಇಲ್ಲವಾದರೆ ಅಡ್ಡ ಪರಿಣಾಮಗಳು ಉಂಟಾಗಬಹುದು.

ಮಿಲ್ಕ್ ವೀಡ್ ಅಥವಾ ಒಲಿಯಾಂಡರ್ ಸಸ್ಯಗಳು ಆಪೋಸಿನೆಸಿಯ ಕುಟುಂಬದ ಸಸ್ಯಗಳಾಗಿವೆ. ದೇಹದ ಯಾವುದಾದರೂ ಒಂದು ಭಾಗದಲ್ಲಿ ಪ್ಯಾಚ್ ರೀತಿಯಲ್ಲಿ ಸ್ವಲ್ಪ ಹಚ್ಚಿ ಪರೀಕ್ಷೆ ಮಾಡಿ ನಂತರ ಅದನ್ನು ಬಳಸಬೇಕು ನಿಮ್ಮ ತ್ವಚೆಗೆ ಅದು ಸೂಟ್ ಆಗುತ್ತದೆಯೇ ಎಂಬುದನ್ನು ನೋಡಿಕೊಳ್ಳಬೇಕು.

ಗುಣಲಕ್ಷಣಗಳು ಇರುವುದರಿಂದ ಇದು ಸಾಕಷ್ಟು ಆರೋಗ್ಯಕರ ಪ್ರಯೋಜನಗಳನ್ನು ಹೊಂದಿದೆ.

ಗಿಡದಲ್ಲಿ ಲಾಟಿಕ್ಸ್ ಎನ್ನುವ ಅಂಶ ಇದ್ದು, ಪುರಾತನ ಕಾಲದಿಂದಲೂ ಇದನ್ನು ಬಳಸಿಕೊಂಡು ಬರಲಾಗುತ್ತಿದೆ. ಗಿಡದ ರಸ ಗಾಯವನ್ನು ತಕ್ಷಣಕ್ಕೆ ಗುಣಪಡಿಸುತ್ತದೆ ಪುನ:ಸ್ಥಾಪಿಸಲು ಇದು ಸಹಾಯ ಮಾಡುತ್ತದೆ. ಅಲ್ಲದೆ ಇದರಲ್ಲಿರುವ ಆಂಟಿ ಮೈಕ್ರೋಬಿಯಲ್ ಗುಣಲಕ್ಷಣದಿಂದಾಗಿ ಸೋಂಕುಗಳನ್ನು ಕೂಡ ತಡೆಗಟ್ಟಬಹುದು.

ಅಸ್ತಮಾ,ಬ್ರಾಂಕೈಟಿಸ್, ಕೆಮ್ಮು ಮೊದಲಾದ ಸಮಸ್ಯೆಗಳಿಗೆ ಇದು ಅತ್ಯುತ್ತಮ ಪರಿಹಾರ ನೀಡುತ್ತದೆ. ದೇಹದಲ್ಲಿ ಕಾಣಿಸಿಕೊಳ್ಳುವ ದದ್ದು, ತುರಿಕೆ ಸೋರಿಯಾಸಿಸ್ ಮೊದಲಾದ ಚರ್ಮ ಸಂಬಂಧಿ ಕಾಯಿಲೆಗಳಿಗೆ ಅತ್ಯುತ್ತಮ ಚಿಕಿತ್ಸೆ ನೀಡುತ್ತದೆ.

ಅಡ್ಡ ಪರಿಣಾಮಗಳು: ಗಿಡದ ಔಷಧಿ ಬಹಳ ಒಳ್ಳೆಯದು ನಿಜ ಆದರೆ ಇದರ ಬಳಕೆ ಸರಿಯಾಗಿ ಆಗದೆ ಇದ್ದಲ್ಲಿ ಕೆಲವು ಅಡ್ಡ ಪರಿಣಾಮಗಳು ಕೂಡ ಉಂಟಾಗಬಹುದು ಹಾಗಾಗಿ ಇದನ್ನು ಬಳಕೆ ಮಾಡುವುದಕ್ಕೂ ಮೊದಲು ಇರುವ ಅಡ್ಡ ಪರಿಣಾಮಗಳ ಬಗ್ಗೆಯೂ ತಿಳಿದುಕೊಳ್ಳುವುದು ಬಹಳ ಮುಖ್ಯ.

ಸರಿಯಾದ ಪ್ರಮಾಣದಲ್ಲಿ ಸೇವನೆ ಮಾಡದೆ ಇದ್ದರೆ ಇದು ಜೀರ್ಣಾಂಗದ ಸಮಸ್ಯೆಯನ್ನು ಉಂಟು ಮಾಡಬಹುದು ಅತಿಸಾರ, ವಾಕರಿಕೆ ಅಥವಾ ವಾಂತಿ ಮೊದಲಾದ ಸಮಸ್ಯೆಗೆ ಕಾರಣವಾಗಬಹುದು. ಕೆಲವರಿಗೆ ಈ ರಸ ಅವರ ತ್ವಚೆಗೆ ಸರಿ ಹೊಂದದೆ ಇರಬಹುದು ಇಂತಹ ಸಂದರ್ಭದಲ್ಲಿ ತುರಿಕೆ ಹೆಚ್ಚಾಗುವುದು ಊತ ಕಾಣಿಸಿಕೊಳ್ಳುವುದು ಮೊದಲಾದ ಸಮಸ್ಯೆಗಳು ಉಂಟಾಗಬಹುದು ಹಾಗಾಗಿ ಇದನ್ನು ಸಂಪೂರ್ಣ ದೇಹಕ್ಕೆ ಹಚ್ಚುವುದಕ್ಕೂ ಮೊದಲು ದೇಹದ ಸಣ್ಣ ಚರ್ಮದ ಭಾಗಕ್ಕೆ ಹಚ್ಚಿ ಯಾವುದೇ ಅಡ್ಡ ಪರಿಣಾಮ ಇಲ್ಲ ಎಂಬುದನ್ನು ಖಚಿತ ಪಡಿಸಿಕೊಂಡು ನಂತರ ಬಳಕೆ ಮಾಡಿ.

ಎಕ್ಕದ ರಸದಲ್ಲಿ ಎಂಬುದು ಕಂಡು ಬಂದಿದೆ ಇದು ಹೃದಯದ ಕ್ರಿಯೆಯ ಮೇಲೆ ಪರಿಣಾಮ ಉಂಟು ಮಾಡಿ ಹೃದಯದ ಸಮಸ್ಯೆಗೆ ಕಾರಣವಾಗಬಹುದು ಜೊತೆಗೆ ಅಧಿಕಾರದಂತಹ ಸಮಸ್ಯೆ ಕೂಡ ಎದುರಿಸಬೇಕಾಗಬಹುದು.

ತಜ್ಞರ ಸಹಾಯವನ್ನು ಪಡೆದುಕೊಂಡು ಇದರ ಸರಿಯಾದ ಬಳಕೆ ತಿಳಿದುಕೊಂಡರೆ ಈ ಔಷಧದಿಂದಲೇ ಹಲವು ಅನಾರೋಗ್ಯಕರ ಸಮಸ್ಯೆಗಳನ್ನು ನಿವಾರಿಸಿಕೊಳ್ಳಬಹುದು.

ಹಿಂದಿನ ಲೇಖನಕೊಬ್ಬರಿ ಬೆಂಬಲ ಬೆಲೆ ಹೆಚ್ಚಿಸುವ ಕುರಿತು ಸಿಎಂ ಜೊತೆ ಚರ್ಚಿಸಿ ಕ್ರಮ: ಸಚಿವ ಶಿವಾನಂದ ಪಾಟೀಲ್
ಮುಂದಿನ ಲೇಖನರಾಜ್ಯದ ಶೈಕ್ಷಣಿಕ ವ್ಯವಸ್ಥೆಯನ್ನು ಅಶ್ವತ್ಥನಾರಾಯಣ ಸಂಫೂರ್ಣ ಹಾಳು ಮಾಡಿದ್ದಾರೆ: ವೀರಪ್ಪ ಮೊಯ್ಲಿ