ಮಂಗಳೂರು: ನಗರದ ಮರೋಳಿಯಲ್ಲಿರುವ ಸ್ಪ್ರಿಂಗ್ ಮತ್ತು ಇತರ ವಸ್ತುಗಳನ್ನು ತಯಾರಿಸುವ ಖಾಸಗಿ ಕಂಪೆನಿಯಲ್ಲಿ ನಡೆದ ಅವಘಡದಲ್ಲಿ ಗಾಯಗೊಂಡಿದ್ದ ಕಂಕನಾಡಿ ಗರೋಡಿ ಬಳಿಯ ನಿವಾಸಿ ಪ್ರದೀಪ್ ಗರೋಡಿ(52) ಜು.21ರ ರವಿವಾರ ಮೃತಪಟ್ಟಿದ್ದಾರೆ.
ಜು.18 ರಂದು ಪ್ರದೀಪ್ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದಾಗ ಈ ಅವಘಡ ಸಂಭವಿಸಿದ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದು, ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೇ ರವಿವಾರ ಮೃತಪಟ್ಟಿದ್ದಾರೆ.
ಮೃತರು ಪತ್ನಿ, ಪುತ್ರನನ್ನು ಅಗಲಿದ್ದಾರೆ.