ಮನೆ ಅಪರಾಧ ಲಾರಿ – ರಿಕ್ಷಾ ನಡುವೆ ಅಪಘಾತ: ಓರ್ವನಿಗೆ ಗಾಯ

ಲಾರಿ – ರಿಕ್ಷಾ ನಡುವೆ ಅಪಘಾತ: ಓರ್ವನಿಗೆ ಗಾಯ

0

ಬಂಟ್ವಾಳ: ಲಾರಿ ಮತ್ತು ರಿಕ್ಷಾ ನಡುವೆ ನಡೆದ ಅಪಘಾತದಲ್ಲಿ ರಿಕ್ಷಾ ಚಾಲಕ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಆದಿತ್ಯವಾರ ರಾತ್ರಿ ವೇಳೆ ಜಕ್ರಿಬೆಟ್ಟು ಎಂಬಲ್ಲಿ ನಡೆದಿದೆ.

ಪೊಳಲಿ, ಬೆಳಂದೂರು ನಿವಾಸಿ ರಿಕ್ಷಾ ಚಾಲಕ ಚೇತನ್ ಗಾಯಗೊಂಡ ವ್ಯಕ್ತಿ.

ಚೇತನ್ ಬಡ್ಡಕಟ್ಟೆಯಿಂದ ಜಕ್ರಿಬೆಟ್ಟು ಕಡೆಗೆ ಹೋಗುತ್ತಿದ್ದ ವೇಳೆ ಬಂಟ್ವಾಳ ಜಕ್ರಿಬೆಟ್ಟು ಪಂಪ್ ಹೌಸ್ ಮುಂದೆ ಬಂಟ್ವಾಳ ಪೇಟೆಯಿಂದ ಹೆದ್ದಾರಿಗೆ ಕ್ರಾಸ್ ಮಾಡುವ ವೇಳೆ ಬೆಳ್ತಂಗಡಿ ಕಡೆಯಿಂದ ಮರದ ದಿಮ್ಮಿಗಳನ್ನು ಹೇರಿಕೊಂಡು ಬರುತ್ತಿದ್ದ ಲಾರಿಗೆ ಡಿಕ್ಕಿಯಾಗಿದೆ.

ಡಿಕ್ಕಿಯಾದ ರಭಸಕ್ಕೆ ರಿಕ್ಷಾ ಸಂಪೂರ್ಣ ಜಖಂಗೊಂಡಿದೆ. ಆದರೆ ಚಾಲಕ ಚೇತನ್ ಅವರ ಕಾಲಿಗೆ ಸ್ವಲ್ಪ ಗಾಯವಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಸ್ಥಳಕ್ಕೆ ಬಂಟ್ವಾಳ ಟ್ರಾಫಿಕ್ ಪೊಲೀಸರು ಭೇಟಿ ನೀಡಿದ್ದಾರೆ.

ಹಿಂದಿನ ಲೇಖನಚಾಲಕನ ನಿಯಂತ್ರಣ ತಪ್ಪಿ ಟ್ಯಾಂಕರ್ ಪಲ್ಟಿ: ಪ್ರಾಣಾಪಾಯದಿಂದ ಚಾಲಕ ಪಾರು
ಮುಂದಿನ ಲೇಖನಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ ಗೆ ಡಿಕ್ಕಿ ಹೊಡೆದ ಬಸ್: ಐವರು ಸಜೀವ ದಹನ