ಬೆಂಗಳೂರು: ದಲಿತರನ್ನು ಮುಗಿಸುವುದರಲ್ಲಿ ಸಿದ್ದರಾಮಯ್ಯ ಅವರು ಸ್ಟ್ರಾಂಗ್ ಎಂದು ವಿಧಾನ ಪರಿಷತ್ ಸದಸ್ಯ ಛಲವಾದಿ ನಾರಾಯಣ ಸ್ವಾಮಿ ತಿರುಗೇಟು ನೀಡಿದ್ದಾರೆ.
ಬೆಂಗಳೂರಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ದುರ್ಬಲ ಪಿಎಂ ಎಂದು ಟೀಕಿಸಿರುವ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ನಾನೇ ಸ್ಟ್ರಾಂಗ್ ಸಿಎಂ ಅಂತ ಸಿದ್ದರಾಮಯ್ಯ ಹೇಳಿಕೊಂಡು ಓಡಾಡುತ್ತಾರೆ. ಇವರಿಗೆ ಸ್ಟ್ರಾಂಗ್ ಸಿಎಂ ಅಂತ ಸರ್ಟಿಫಿಕೇಟ್ ಕೊಟ್ಟವರು ಯಾರು? ದಲಿತರನ್ನು ಮುಗಿಸುವುದರಲ್ಲಿ ಸಿದ್ದರಾಮಯ್ಯ ಬಹಳ ಸ್ಟ್ರಾಂಗ್ ಇರಬಹುದು ಎಂದರು.
ಕಾಂಗ್ರೆಸ್ ಪಕ್ಷ ಮುಗಿಸುವುದರಲ್ಲಿ ನೀವು (ಸಿದ್ದರಾಮಯ್ಯ) ಬಹಳ ಸ್ಟ್ರಾಂಗ್ ಇದ್ದೀರಿ. ಮೋದಿ ಕಾಲಿನ ಧೂಳಿಗೂ ನೀವು ಸಮವಲ್ಲ. ಮೇಕೆದಾಟು ವಿರೋಧ ಮಾಡುವ ಡಿಎಂಕೆ ವಿರುದ್ಧ ಯಾವಾಗ ಪಾದಯಾತ್ರೆ ಮಾಡುತ್ತೀರಿ ಎಂದು ಛಲವಾದಿ ನಾರಾಯಣ ಸ್ವಾಮಿ ಪ್ರಶ್ನಿಸಿದರು.