ಮನೆ ಅಪರಾಧ ಕಳಸಾರೋಹಣ ವೇಳೆ ಅವಘಡ: ಕ್ರೇನ್ ನಿಂದ ಬಿದ್ದು ವ್ಯಕ್ತಿ ಸಾವು

ಕಳಸಾರೋಹಣ ವೇಳೆ ಅವಘಡ: ಕ್ರೇನ್ ನಿಂದ ಬಿದ್ದು ವ್ಯಕ್ತಿ ಸಾವು

0

ಹಾವೇರಿ: ಜಿಲ್ಲೆಯ ಹಾನಗಲ್ ತಾಲ್ಲೂಕಿನ ಶೇಷಗಿರಿ ಗ್ರಾಮದಲ್ಲಿ ದೇವಸ್ಥಾನದ ಕಳಸಾರೋಹಣ ವೇಳೆ ಅವಘಡ ಸಂಭವಿಸಿದ್ದು, ಕ್ರೇನ್‌ನಿಂದ ಬಿದ್ದು ಮಂಜುನಾಥ ಪಾಟೀಲ (42) ಎಂಬುವವರು‌ ಮೃತಪಟ್ಟಿದ್ದಾರೆ.

Join Our Whatsapp Group

ಶುಕ್ರವಾರ ಬೆಳಿಗ್ಗೆ ನಡೆದಿರುವ ಅವಘಡದಲ್ಲಿ ಸ್ಥಳೀಯ ನಿವಾಸಿ ಮಂಜುನಾಥ ಹಾಗೂ ಇನ್ನೊಬ್ಬ ವ್ಯಕ್ತಿ ಗಾಯಗೊಂಡಿದ್ದರು. ಇಬ್ಬರನ್ನು ಹಾನಗಲ್ ತಾಲ್ಲೂಕು ಆಸ್ಪತ್ರೆಗೆ ದಾಖಲಿಸಲಾಗಿತ್ತು. ತೀವ್ರ ಗಾಯಗೊಂಡಿದ್ದ ಮಂಜುನಾಥ ಮೃತಪಟ್ಟಿದ್ದಾರೆ. ಇನ್ನೊಬ್ಬ ವ್ಯಕ್ತಿ ಚೇತರಿಸಿಕೊಳ್ಳಿತ್ತಿದ್ದಾರೆ.

ಶೇಷಗಿರಿ ಗ್ರಾಮದಲ್ಲಿ ಗಂಗಾಪರಮೇಶ್ವರಿ ದೇವಸ್ಥಾನದ ಕಳಸಾರೋಹಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಇದೇ ಸಂದರ್ಭದಲ್ಲಿ ಮಂಜುನಾಥ್ ಹಾಗೂ ಇನ್ನೊಬ್ಬ ವ್ಯಕ್ತಿ, ಕ್ರೇನ್‌ನ ಮುಂಭಾಗದ ಬುಟ್ಟಿಯಲ್ಲಿ ಹತ್ತಿ ಗೋಪುರಕ್ಕೆ ಕಳಸ ಇರಿಸಲು ಮುಂದಾಗಿದ್ದರು. ಇದೇ ಸಂದರ್ಭದಲ್ಲಿ ಕ್ರೇನ್‌ನ ಬುಟ್ಟಿ ಏಕಾಏಕಿ ಕಳಚಿ ಬಿದ್ದಿತ್ತು.  ಇದರಿಂದಾಗಿ ಇಬ್ಬರೂ ತೀವ್ರ ಗಾಯಗೊಂಡಿದ್ದರು. ತಲೆಗೆ ತೀವ್ರ ಪೆಟ್ಟು ಬಿದ್ದು ಮಂಜುನಾಥ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.