ಮನೆ ಅಪರಾಧ ಬೆಂಕಿ ಆಕಸ್ಮಿಕ: 3 ಎಕರೆ ಕಬ್ಬು ಬೆಳೆ ನಾಶ

ಬೆಂಕಿ ಆಕಸ್ಮಿಕ: 3 ಎಕರೆ ಕಬ್ಬು ಬೆಳೆ ನಾಶ

0

ಶ್ರೀರಂಗಪಟ್ಟಣ:ತಾಲ್ಲೂಕಿನ ಕಡತನಾಳು ಗ್ರಾಮದಲ್ಲಿ ಬೆಂಕಿ ಆಕಸ್ಮಿಕದಿಂದ ಮೂರು ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಕಬ್ಬು ಬೆಳೆ ಸುಟ್ಟು ಹೋಗಿದೆ.

ಗ್ರಾಮದ ಶಿವಣ್ಣ ಅವರ ಎರಡು ಎಕರೆ ಹಾಗೂ ಡಾಮಡಹಳ್ಳಿಯ ಅಂದಾನಯ್ಯ ಅವರ ಒಂದು ಎಕರೆಯಷ್ಟು ಕಬ್ಬು ಬೆಳೆ ಸುಟ್ಟು ಹೋಗಿದೆ. ಅಗ್ನಿಶಾಮಕ ದಳ ಸಿಬ್ಬಂದಿ ಧಾವಿಸಿ ಬೆಂಕಿ ನಂದಿಸುವ ಪ್ರಯತ್ನ ನಡೆಸಿದರು.

ಆದರೂ. ಶೇ 90ರಷ್ಟು ಬೆಳೆ ಸುಟ್ಟು ಹೋಗಿದೆ. ಬೆಂಕಿಯ ಕೆನ್ನಾಲಿಗೆಗೆ 20ಕ್ಕೂ ಹೆಚ್ಚು ತೆಂಗಿನ ಸಸಿಗಳು ಸುಟ್ಟಿವೆ. ‘ಪಕ್ಕದ ಕಲ್ಲು ಕ್ವಾರಿಯಲ್ಲಿ ತುಂಬಿದ್ದ ನೀರು ಬಳಸಿ ಕಬ್ಬು ಬೆಳೆ ಉಳಿಸಿಕೊಂಡಿದ್ದೆ. ಆದರೆ 6 ತಿಂಗಳ ಕಬ್ಬು ಸುಟ್ಟು ಹೋಗಿದೆ. ₹2 ಲಕ್ಷಕ್ಕೂ ಹೆಚ್ಚು ನಷ್ಟ ಉಂಟಾಗಿದೆ’ ಎಂದು ರೈತ ಶಿವಣ್ಣ ಹೇಳಿದರು.

ಹಿಂದಿನ ಲೇಖನಮೈಸೂರು ಪೇಂಟ್ಸ್ ಕಾರ್ಖಾನೆಗೆ ಸದ್ಯದಲ್ಲೇ ಬ್ರ್ಯಾಂಡ್ ವರ್ಚಸ್ಸು: ಎಂ ಬಿ ಪಾಟೀಲ
ಮುಂದಿನ ಲೇಖನನೌಕರರ ರಾಜ್ಯ ವಿಮಾ ನಿಗಮದಲ್ಲಿ ಖಾಯಂ ಹುದ್ದೆಗಳಿಗೆ UPSC ಅಧಿಸೂಚನೆ ಬಿಡುಗಡೆ