ಸಂಕೇಶ್ವರ: ಧಾಬಾ ಒಂದರ ಮುಂದೆ ಕಾರುಗಳನ್ನು ಹೊತ್ತು ನಿಂತಿದ್ದ ಎರಡು ಕ್ಯಾಂಟರ್ ಲಾರಿಗಳಿಗೆ ಆಕಸ್ಮಿಕ ಬೆಂಕಿ ತಗುಲಿ ಲಕ್ಷಾಂತರ ರೂ. ನಷ್ಟವಾದ ಘಟನೆ ಹುಕ್ಕೇರಿ ತಾಲೂಕಿನ ಹಿಟ್ನಿ ಕ್ರಾಸ್ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.
ಶುಕ್ರವಾರ ಬೆಳಿಗ್ಗೆ ಹುಕ್ಕೇರಿ ತಾಲೂಕಿನ ಹಿಟ್ನಿ ಕ್ರಾಸ್ ಬಳಿ ಪುಣೆ- ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಬಳಿ ಈ ಅವಘಡ ಸಂಭವಿಸಿದೆ.
ಅವಘಡ ನಡೆದ ಸ್ಥಳದಿಂದ ಸ್ವಲ್ಪ ಅಂತರದಲ್ಲಿಯೇ ಪೆಟ್ರೋಲ್ ಬಂಕ್ ಒಂದು ಇದ್ದು, ಇದಕ್ಕೂ ಅಪಾಯವಾಗುವ ಪರಿಸ್ಥಿತಿ ಇದೆ ಎನ್ನಲಾಗಿದೆ. ಅಲ್ಲದೆ ಈ ಕ್ಯಾಂಟರ್ ಲಾರಿಗಳು ವಾಹನಗಳನ್ನು ಸಾಗಿಸುವ ಲಾರಿಗಳಾಗಿವೆ. ಈ ಕ್ಯಾಂಟರ್ ಗಳಲ್ಲಿ ವಾಹನಗಳು ತುಂಬಿದ್ದವು ಎಂಬ ಮಾಹಿತಿ ಲಭ್ಯವಾಗಿದೆ.














