ಶಿವಮೊಗ್ಗ: 63 ಸಾವಿರ ಎಫ್ ಡಿ ಹಣ ನೀಡಲು 40 ಸಾವಿರ ರೂ ಲಂಚ ಪಡೆಯುವಾಗ ವಿಶ್ವವಿದ್ಯಾಲಯದ ಎಇಇ ಹಾಗೂ ಅಕೌಂಟೆಂಟ್ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ, ವಿಜ್ಞಾನಗಳ ವಿಶ್ವವಿದ್ಯಾಲಯದ ಎಇಇ ಲೋಹಿತ್ ಹಾಗೂ ಅಕೌಂಟೆಟ್ ಗಿರೀಶ್ ಎಂಬುವರು ಲೋಕಾಯುಕ್ತ ಬಲೆಗೆ ಬಿದ್ದವರು.
ಸಾಗರ ತಾಲೂಕು ಇರುವಕ್ಕಿಯ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ವ್ಯಾಪ್ತಿಯ ಹಿರಿಯೂರಿನ ಇಲಾಖೆಯ ಇಬ್ಬರು ಅಧಿಕಾರಿಗಳು ಕೆ.ವಿ.ಕೆ ಜಬ್ಬೂರ್ ಫಾರ್ಮ್ ನ ಆಡಳಿತ ವಿಭಾಗದ ಕಚೇರಿಯ ಮೇಲ್ಛಾವಣಿಯನ್ನು ಶಿವಮೊಗ್ಗದ ವಿದ್ಯಾನಗರದ ನಿವಾಸಿ ಗುತ್ತಿಗೆದಾರರಾದ ಸುನೀಲ್ ಎಂಬುವರು ನಿರ್ಮಾಣ ಮಾಡಿದ್ದರು. ಸುನೀಲ್ ಅವರು 3,59,331 ರೂಗಳಿಗೆ ಕಾಮಗಾರಿ ನಡೆಸಿದ್ದರು.
ಈ ಕಾಮಗಾರಿಗಾಗಿ ಎಫ್ ಡಿ ಹಣವನ್ನಾಗಿ 63 ಸಾವಿರ ರೂಗಳನ್ನು ವಿವಿಯಲ್ಲಿ ಇಟ್ಟಿದ್ದೆ. ಕಾಮಗಾರಿ ಮುಗಿದ ಕಾರಣಕ್ಕೆ ಎಫ್ ಡಿ ಹಣವನ್ನು ವಾಪಸ್ ಕೇಳಲು ಬಂದಾಗ ವಿವಿಯ ಎಇಇ ಲೋಹಿತ್ ಅವರು 40 ಸಾವಿರ ರೂ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆಂದು ಲೋಕಾಯುಕ್ತ ಪೊಲೀಸರಿಗೆ ಸುನೀಲ್ ದೂರು ನೀಡಿದ್ದರು. ಈ ದೂರಿನ ಮೇರೆಗೆ 40 ಸಾವಿರ ರೂ ಲಂಚ ಪಡೆಯುವಾಗ ದಾಳಿ ನಡೆಸಲಾಗಿದೆ.
40 ಸಾವಿರ ರೂ ಲಂಚ ಪಡೆಯುವಾಗ ಲೋಕಾಯುಕ್ತ ಅಧೀಕ್ಷಕರಾದ ಮಂಜುನಾಥ್ ಚೌಧರಿ ಹಾಗೂ ಉಪ ಅಧೀಕ್ಷಕರಾದ ಉಮೇಶ್ ಈಶ್ವರ್ ನಾಯಕ್ ಅವರ ಮಾರ್ಗದರ್ಶನದಲ್ಲಿ ನೀರಿಕ್ಷಕರಾದ ಪ್ರಕಾಶ್, ವೀರಭದ್ರಪ್ಪ ದಾಳಿ ನಡೆಸಿದ್ದಾರೆ.
ದಾಳಿಯ ವೇಳೆ ಸಿಬ್ಬಂದಿ ಯೋಗೇಶ್, ಮಹಾಂತೇಶ್ ಸೇರಿದಂತೆ ಇತರ ಸಿಬ್ಬಂದಿ ಹಾಜರಿದ್ದರು.