ಕಲಬುರಗಿ : ಸಚಿವ ಪ್ರಿಯಾಂಕ್ ಖರ್ಗೆಗೆ ಬೆದರಿಕೆ ಹಾಕಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಮಹಾರಾಷ್ಟ್ರದ ಲಾತೂರ್‌ನಲ್ಲಿ ಆರೋಪಿಯನ್ನು ಬಂಧಿಸಿದ್ದಾರೆ.
ಬೆದರಿಕೆ ಕರೆ ಮಾಡಿದ ಸೋಲಾಪುರ ಮೂಲದ ದಾನೇಶ್ ನರೋಣಿ ಬಂಧಿತ ಆರೋಪಿ. ಫೋನ್ ಕರೆ ಮಾಡಿದ ಬಳಿಕ ಸೋಲಾಪುರದಿಂದ ಲಾತೂರ್‌ಗೆ ಪರಾರಿಯಾಗಿದ್ದ. ಹೀಗಾಗಿ, ಬೆಂಗಳೂರು ಹಾಗೂ ಕಲಬುರಗಿ ಪೊಲೀಸರು ಜಂಟಿ ಕಾರ್ಯಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.
ಇಂದು ರಾತ್ರಿವರೆಗೆ ಬೆಂಗಳೂರು ಸದಾಶಿವನಗರ ಪೊಲೀಸ್ ಠಾಣೆಗೆ ಆರೋಪಿಯನ್ನು ಕರೆತರುವ ಸಾಧ್ಯತೆಯಿದೆ. ಸಚಿವ ಪ್ರಿಯಾಂಕ್ ಖರ್ಗೆಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದ. ಆರೋಪಿಯನ್ನು ಸದಾಶಿವನಗರ ಠಾಣೆ ಪೊಲೀಸರಿಗೆ ಕಲಬುರಗಿ ಪೊಲೀಸರು ಒಪ್ಪಿಸಲಿದ್ದಾರೆ. ಸೋಲಾಪುರದಿಂದ ಬೆಂಗಳೂರಿಗೆ ಕರೆದುಕೊಂಡು ಹೋಗಲಿದ್ದಾರೆ.
ಗೂಗಲ್‌ನಲ್ಲಿ ಸಚಿವರ ನಂಬರ್ ತೆಗೆದುಕೊಂಡು ದಾನಪ್ಪ ಕರೆ ಮಾಡಿದ್ದ. ಫೋನ್ ಕರೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದ. ಈ ಸಂಬಂಧ ಸಚಿವರು ಪೊಲೀಸ್ ಠಾಣೆಗೆ ದೂರು ನೀಡಿದ್ದರು.















