ಮನೆ ರಾಜ್ಯ ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಕೆ ಆರೋಪ: ಡಿಸಿಎಫ್’ಗೆ ಲೋಕಾಯುಕ್ತ ಶಾಕ್

ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಕೆ ಆರೋಪ: ಡಿಸಿಎಫ್’ಗೆ ಲೋಕಾಯುಕ್ತ ಶಾಕ್

0

ಕೋಲಾರ: ಆದಾಯಕ್ಕೂ ಅಧಿಕ ಆಸ್ತಿ ಸಂಗ್ರಹ ಆರೋಪದಡಿ ಮೊಟ್ಟ ಮೊದಲ ಪ್ರಕರಣ ದಾಖಲಿಸಿಕೊಂಡ ಲೋಕಾಯುಕ್ತ ಪೊಲೀಸರು ಆರೋಪಿ ಅಧಿಕಾರಿಗೆ ಸಂಬಂಧಿಸಿದ ಸ್ಥಳಗಳ ಮೇಲೆ ದಾಳಿ ನಡೆಸಿದ್ದಾರೆ.

ಕೋಲಾರ ಸಾಮಾಜಿಕ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ (ಡಿಸಿಎಫ್) ಜಿ.ವೆಂಕಟೇಶ್‌ ವಾಸವಿರುವ ಕ್ವಾರ್ಟರ್ಸ್ ಮೇಲೆ ಶುಕ್ರವಾರ ಬೆಳಿಗ್ಗೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ಶೋಧ ನಡೆಸುತ್ತಿದ್ದಾರೆ.

ಈ ಸಂದರ್ಭದಲ್ಲಿ ವೆಂಕಟೇಶ್ ಇರಲಿಲ್ಲ. ಕ್ವಾರ್ಟರ್ಸ್ ನಲ್ಲಿ ಹಣ ಸಿಕ್ಕಿರುವ ಮಾಹಿತಿ ಲಭ್ಯವಾಗಿದೆ.

ಲೋಕಾಯುಕ್ತ ಎಸ್‌ಪಿ ಉಮೇಶ್ ದಾಳಿ ಕುರಿತು ಮಾತನಾಡಿ, ಕ್ಲಾಕ್ ಟವರ್ ಬಳಿ ಇರುವ ಅರಣ್ಯ ಇಲಾಖೆ ಕ್ವಾರ್ಟರ್ಸ್ ಹಾಗೂ ಹಳೆ ಜಿಲ್ಲಾಧಿಕಾರಿ ಕಚೇರಿ ಬಳಿ ಇರುವ ಕಚೇರಿ ಶೋಧಿಸಿ ಮಹಜರ್ ಮಾಡಿದ್ದೇವೆ. ಕೆಲ ದಾಖಲೆಗಳನ್ನು ವಶಕ್ಕೆ ಪಡೆದುಕೊಂಡಿದ್ದೇವೆ ಎಂದು ತಿಳಿಸಿದರು.