ಮನೆ ಕಾನೂನು ತಂಗಿಯನ್ನು ಕೊಲೆ ಮಾಡಿದ ಆರೋಪಿಗೆ ಜೀವಾವಧಿ ಶಿಕ್ಷೆ

ತಂಗಿಯನ್ನು ಕೊಲೆ ಮಾಡಿದ ಆರೋಪಿಗೆ ಜೀವಾವಧಿ ಶಿಕ್ಷೆ

0

ಬಳ್ಳಾರಿ(Ballari): ತಂಗಿಯ ತಲೆಯ ಮೇಲೆ ಕೆರೆ ಬಂಡೆ ಎತ್ತಿಹಾಕಿ ಕೊಲೆ ಮಾಡಿದ ಅಪರಾಧಿಗೆ ಇಲ್ಲಿನ ಒಂದನೇ ಹೆಚ್ಚುವರಿ ಜಿಲ್ಲಾ ಹಾಗೂ ಸೆಷನ್ಸ್‌ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

ಸಿರುಗುಪ್ಪ ಪಟ್ಟಣದಲ್ಲಿ 2017ರ ಫೆಬ್ರುವರಿ 18ರಂದು ಈ ಘಟನೆ ನಡೆದಿತ್ತು. ಜೀವಾವಧಿ ಶಿಕ್ಷೆಗೊಳಗಾದ ನಾಗರಾಜ ತನ್ನ ತಾಯಿ ಮತ್ತು ತಂಗಿ ಶಕುಂತಲಾ ಜತೆ ಜಗಳ ತೆಗೆದು, ತಂಗಿಯನ್ನು ತಳ್ಳಿ ಆಕೆ ನೆಲಕ್ಕೆ ಬಿದ್ದಾಗ, ಮನೆಯ ಹೊರಗಿದ್ದ ಕೆರೆ ಬಂಡೆ ತಂದು ತಲೆ ಮೇಲೆ ಎತ್ತಿಹಾಕಿ ಕೊಲೆ ಮಾಡಿದ್ದ.

ತಕ್ಷಣ ಆಕೆಯನ್ನು ಸಿರುಗುಪ್ಪ ಸರ್ಕಾರಿ ಆಸ್ಪತ್ರೆಗೆ ಸಾಗಿಸಿದರೂ ಬದುಕುಳಿಯಲಿಲ್ಲ ಎಂದು ‍ಪ್ರಾಸಿಕ್ಯೂಷನ್‌ ಅರೋಪಿಸಿತ್ತು.

ಈ ಘಟನೆ ಕುರಿತು ಪ್ರತ್ಯಕ್ಷದರ್ಶಿಗಳು ಸಾಕ್ಷ್ಯ ಹೇಳಿದ್ದರು.ಕೊಲೆ ಪ್ರಕರಣದ ವಿಚಾರಣೆ ನಡೆಸಿದ ಒಂದನೇ ಹೆಚ್ಚುವರಿ ಜಿಲ್ಲಾ ಹಾಗೂ ಸೆಷನ್ಸ್‌ ನ್ಯಾಯಾಧೀಶ ಡಿ. ವಿನಯ್‌ ನಾಗರಾಜನಿಗೆ ಕೊಲೆ ಅಪರಾಧಕ್ಕೆ ಜೀವಾವಧಿ ಶಿಕ್ಷೆ, ₹ 20 ಸಾವಿರ ದಂಡ ಮತ್ತು ಐಪಿಸಿ ಸೆಕ್ಷನ್‌ 323ರ ಅಡಿ ಮಾಡಿದ ಅಪರಾಧಕ್ಕೆ ಮೂರು ತಿಂಗಳ ಸಾದಾ ಸಜೆ ವಿಧಿಸಿ ಆದೇಶಿಸಿದ್ದಾರೆ.

ದಂಡದ ಹಣದಲ್ಲಿ ಶೇ 70ರಷ್ಟನ್ನು ಮೃತಳ ತಾಯಿಗೆ, ಉಳಿದ ಶೇ 30ರಷ್ಟನ್ನು ಸರ್ಕಾರಕ್ಕೆ ಪಾವತಿಸಲು ನ್ಯಾಯಾಧೀಶರು ಆದೇಶಿಸಿದ್ದಾರೆ.

ಈ ಪ್ರಕರಣದಲ್ಲಿ ಹಿಂದಿನ ಸರ್ಕಾರಿ ಅಭಿಯೋಜಕರಾಗಿದ್ದ ಲಕ್ಷ್ಮೀದೇವಿ ಪಾಟೀಲ್‌ ಸಾಕ್ಷಿಗಳ ವಿಚಾರಣೆ ನಡೆಸಿದ್ದರು. ಸರ್ಕಾರಿ ಅಭಿಯೋಜಕ ಶೇಖರಪ್ಪ ಪ್ರಾಸಿಕ್ಯೂಷನ್‌ ಪರವಾಗಿ ವಾದಿಸಿದ್ದರು. ಅಂದಿನ ಸಿರುಗುಪ್ಪ ಇನ್‌ಸ್ಪೆಕ್ಟರ್ ಎಂ. ನಾಗರೆಡ್ಡಿ ಪ್ರಕರಣದ ತನಿಖೆ ನಡೆಸಿ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

ಹಿಂದಿನ ಲೇಖನಮಾಜಿ ರಾಷ್ಟ್ರಪತಿ ರಾಮನಾಥ ಕೋವಿಂದ್’ಗೆ ಝಡ್ ಪ್ಲಸ್ ಭದ್ರತೆ
ಮುಂದಿನ ಲೇಖನಜಗದೋದ್ಧಾರನ