ಮನೆ ಅಪರಾಧ ನಕಲಿ ದಾಖಲೆ ಸೃಷ್ಠಿಸಿ ವೃದ್ಧೆಯ 6 ಎಕರೆ ಜಮೀನು ಕಬಳಿಕೆ ಆರೋಪ

ನಕಲಿ ದಾಖಲೆ ಸೃಷ್ಠಿಸಿ ವೃದ್ಧೆಯ 6 ಎಕರೆ ಜಮೀನು ಕಬಳಿಕೆ ಆರೋಪ

0

ರಾಯಚೂರು: ರಾಯಚೂರು ತಾಲೂಕಿನ ಪೋತಗಲ್ ಬಳಿ ಇರುವ ವೃದ್ಧೆಯ ಆರು ಎಕರೆ ಜಮೀನನ್ನು  ನಕಲಿ ದಾಖಲೆ ಸೃಷ್ಟಿಸಿ ಕಬಳಿಕೆ ಮಾಡಿಕೊಂಡಿರುವ ಆರೋಪ ಕೇಳಿಬಂದಿದ್ದು, ಪ್ರಕರಣದ ಹಿಂದೆ ತಹಶಿಲ್ದಾರ್ ಕಚೇರಿ ಅಧಿಕಾರಿಗಳು, ಬ್ರೋಕರ್ ​​ಗಳ ಕೈವಾಡವಿರುವ ಅನುಮಾನ ವ್ಯಕ್ತವಾಗಿದೆ.

ಪತಿ ಗೋವಿಂದಪ್ಪ ಮರಣದ ನಂತರ ಪೋತಗಲ್ ಗ್ರಾಮಾಂತರ ಸರ್ವೇ ನಂ 172\3 ರ 6 ಎಕರೆ ಜಮೀನು ಪತ್ನಿ ಸುಶೀಲಮ್ಮ (68) ಅವರ ಹೆಸರಿಗೆ ನೊಂದಣಿಯಾಗಿತ್ತು.

ಕಳೆದ 15 ವರ್ಷಗಳಿಂದ ಸುಶೀಲಮ್ಮ ಅವರ ಹೆಸರಲ್ಲಿದ್ದ ಭೂಮಿ ಇದೀಗ ವೃದ್ಧೆ ಸತ್ತಿದ್ದಾಳೆ ಮತ್ತು ಆಕೆಗೆ ಮಕ್ಕಳು ಇಲ್ಲವೆಂದು ಎಂದು ನಕಲಿ ದಾಖಲೆ ಸೃಷ್ಟಿಸಿ,ಎಸ್.ಕೆ.‌ನಾಗರೆಡ್ಡಿ‌ ಎಂಬುವವರ ಹೆಸರಿಗೆ ನೋಂದಣಿಯಾಗಿದೆ. ಈ ವಿಷಯ ತಿಳಿದ ವೃದ್ಧೆ ಸುಶೀಲಮ್ಮ ಮಕ್ಕಳ ಸಮೇತ ರಾಯಚೂರು ತಹಶಿಲ್ದಾರ್ ಕಚೇರಿಗೆ ಭೇಟಿ ನೀಡಿ ದೂರು ನೀಡಿದ್ದಾರೆ.

“ನಾನು ಬದುಕಿದ್ದೇನೆ, ಮಕ್ಕಳಿದ್ದಾರೆ. ನಾನು ಸತ್ತಿದ್ದೇನೆ, ಮಕ್ಕಳಿಲ್ಲ ಅಂತ ನಕಲಿ ದಾಖಲೆ ಸೃಷ್ಟಿಸಿ ನನ್ನ ಜಮೀನನ್ನು ಕಬಳಿಕೆ ಮಾಡಿಕೊಂಡಿದ್ದಾರೆ. ಇವರ ವಿರುದ್ಧ ಕ್ರಮ ಕೈಗೊಳ್ಳಬೇಕು” ಅಂತ ವೃದ್ಧೆ ಅಳಲು ತೋಡಿಕೊಂಡಿದ್ದಾರೆ.