ಮಂಡ್ಯ:- ಪ್ರಕರಣದ ವಿವರ: 17 ವರ್ಷದ ಅಪ್ರಾಪ್ತ ಬಾಲಕಿಯನ್ನು ಆರೋಪಿಯು ಅಪಹರಿಸಿಕೊಂಡು ಹೋಗಿ ಬಲವಂತವಾಗಿ ಬಾಲ್ಯ ವಿವಾಹ ಮಾಡಿಕೊಂಡು ಲೈಂಗಿಕ ದೌರ್ಜನ್ಯ ಎಸಗಿರುವುದಾಗಿ ಕಲಂ:363,354 ಐ.ಪಿ.ಸಿ ಮತ್ತು ಕಲಂ:8,12 ಪೋಕ್ಸೋ ಕಾಯಿದೆ ಹಾಗೂ ಕಲಂ,9 ಬಾಲ್ಯ ವಿವಾಹ ನಿಷೇಧ ಕಾಯಿದೆ ಅಡಿ ಅಂದಿನ ಮೇಲುಕೋಟೆ ಪೋಲೀಸ್ ಠಾಣಾ ಪಿ.ಎಸ್.ಐ ಗಿರಿಧರರವರು ದೋಷಾರೋಪಣಾ ಪತ್ರವನ್ನು ನ್ಯಾಯಾಲಯಕ್ಕೆ ದಾಖಲಿಸಲಾಗಿತ್ತು.
ಈ ಪ್ರಕರಣವು ಸ್ಪೆಷಲ್ ಕೇಸ್ ಸಂ:91/2023 (ಮೇಲುಕೋಟೆ ಪೊಲೀಸ್ ಠಾಣಾ ಮೊ.ಸಂ:9/2023) ರಂತೆ ಮಂಡ್ಯದ ಎಫ್.ಟಿ.ಎಸ್.ಸಿ-1(ಪೋಕ್ಲೋ ವಿಶೇಷ) ನ್ಯಾಯಾಲಯದಲ್ಲಿ ವಿಶೇಷ ನ್ಯಾಯಾಧೀಶರಾದ ಮಾನ್ಯ ಶಬಾನಾ ಬೇಗಂ ಲಾಡ್ಖಾನ್ರವರ ಮುಂದೆ ವಿಚಾರಣೆ ನಡೆದು ಆರೋಪಿ ರಾಜೇಶ ಇವರಿಗೆ ಕಲಂ: 363 ಐ.ಪಿ.ಸಿ ಹಾಗೂ ಕಲಂ:8 ಪೋಕ್ಸೋ ಕಾಯಿದೆ ಆಪರಾಧಗಳಿಗೆ ಅಪರಾಧಿ ಎಂದು ತೀರ್ಪು ನೀಡಿದ್ದು, ಕಲಂ: 363 ಐ.ಪಿ.ಸಿ ಗೆ 1 ವರ್ಷ ಸಾದಾ ಸಜೆ & 5000ರೂ ದಂಡ ಹಾಗೂ ಕಲಂ:8 ರ ಪೋಕ್ಸೋ ಕಾಯಿದೆ ಅಪರಾಧಕ್ಕೆ 3 ವರ್ಷಗಳ ಸಾದಾ ಸಜೆ ಮತ್ತು 15000ರೂ ದಂಡ ವಿಧಿಸಿ ತೀರ್ಪು ನೀಡಿರುತ್ತಾರೆ. ಅಭಿಯೋಜನೆಯ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕರಾದ ಎಂ.ಜೆ.ಪೂರ್ಣಿಮಾರವರು ವಾದ ಮಂಡಿಸಿದ್ದರು.
1ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ವಿಶೇಷ ಸರ್ಕಾರಿ ಅಭಿಯೋಜಕರಾದ (ಪೋಕ್ಸೋ), ಎಂ.ಜೆ.ಪೂರ್ಣಿಮಾರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.