ಮನೆ ಅಪರಾಧ ಬಾಲಕಿ ಮೇಲೆ ಅತ್ಯಾಚಾರವೆಸಗಿ ಕೊಳವೆ ಬಾವಿಗೆ ತಳ್ಳಿದ ಆರೋಪಿಗಳು: ಇಬ್ಬರ ಬಂಧನ

ಬಾಲಕಿ ಮೇಲೆ ಅತ್ಯಾಚಾರವೆಸಗಿ ಕೊಳವೆ ಬಾವಿಗೆ ತಳ್ಳಿದ ಆರೋಪಿಗಳು: ಇಬ್ಬರ ಬಂಧನ

0

ಲಖನೌ: ಬಾಲಕಿ ಮೇಲೆ ಅತ್ಯಾಚಾರವೆಸಗಿ, ಆಕೆಯನ್ನು ಕೊಳವೆ ಬಾವಿಗೆ ತಳ್ಳಿರುವ ಪ್ರಕರಣ ಮೌ ಜಿಲ್ಲೆಯ ಘೋಷಿ ಪೊಲೀಸ್ ಠಾಣೆ ವ್ಯಾಪ್ತಿಯ ಹಳ್ಳಿಯೊಂದರಲ್ಲಿ ಶನಿವಾರ ನಡೆದಿದೆ.

ಈ ಸಂಬಂಧ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಮತ್ತೊಬ್ಬನ ಸೆರೆಗಾಗಿ ಕಾರ್ಯಾಚರಣೆ ಮುಂದುವರಿಸಿದ್ದಾರೆ.

ತಮ್ಮ ಮಗಳು ಕಸ ಎಸೆಯಲು ಮನೆಯಿಂದ ಹೊರಗೆ ಹೋದ ಸಂದರ್ಭದಲ್ಲಿ ಆಕೆಯನ್ನು ಎಳೆದೊಯ್ದು ಸಾಮೂಹಿಕ ಅತ್ಯಾಚಾರ ನಡೆಸಿ, ಕೊಲೆಗೆ ಯತ್ನಿಸಲಾಗಿದೆ. ಈ ವೇಳೆ ಅಲ್ಲಿದ್ದ ಕೆಲವು ಕಾರ್ಮಿಕರು ಪೊಲೀಸರಿಗೆ ಮಾಹಿತಿ ನೀಡಿದ ಬಳಿಕ ಮಗಳನ್ನು ರಕ್ಷಿಸಲಾಗಿದೆ ಎಂದು ಸಂತ್ರಸ್ತ ಬಾಲಕಿಯ ತಂದೆ ದೂರು ನೀಡಿದ್ದಾರೆ.

ಮನೆಯಿಂದ ಸುಮಾರು 200 ಮೀಟರ್‌ ದೂರದಲ್ಲಿ ಕೊಳವೆ ಬಾವಿಯಲ್ಲಿ, ಕೈ–ಕಾಲುಗಳಿಗೆ ಹಗ್ಗ ಕಟ್ಟಿದ ಹಾಗೂ ಬಾಯಿಗೆ ಬಟ್ಟೆ ತುರುಕಿದ ಸ್ಥಿತಿಯಲ್ಲಿ ಬಾಲಕಿ ಪತ್ತೆಯಾಗಿದ್ದಾಳೆ ಎಂದು ಜಿಲ್ಲೆಯ ಹೆಚ್ಚುವರಿ ಎಸ್‌’ಪಿ ತ್ರಿಭುವನ್‌ ನಾಥ್‌ ಮಾಹಿತಿ ನೀಡಿದ್ದಾರೆ.

ಪ್ರಕರಣ ಸಂಬಂಧ ಪೋಕ್ಸೊ ಕಾಯ್ದೆ ಅಡಿಯಲ್ಲಿ ಎಫ್‌’ಐಆರ್‌ ದಾಖಲಿಸಿಕೊಂಡು, ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿದೆ.

ಪ್ರಕರಣಕ್ಕೆ ಸಂಬಂಧಿಸಿದ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದ್ದು, ಇನ್ನೊಬ್ಬನನ್ನೂ ಶೀಘ್ರವೇ ಬಂಧಿಸಲಾಗುವುದು ಎಂದು ಹೇಳಿದ್ದಾರೆ.

ಹಿಂದಿನ ಲೇಖನಮಂಗಳೂರು: ಲವ್ ಜಿಹಾದ್ ಸಂತ್ರಸ್ತರಿಗೆ ಸಹಾಯವಾಣಿ ಆರಂಭಿಸಿದ ವಿಶ್ವ ಹಿಂದೂ ಪರಿಷತ್
ಮುಂದಿನ ಲೇಖನಶಸ್ತ್ರಚಿಕಿತ್ಸೆ ವೇಳೆ ಯುವತಿ ಸಾವು: ಸಂಬಂಧಿಕರಿಂದ ಆಸ್ಪತ್ರೆ ಮುಂಭಾಗ ಪ್ರತಿಭಟನೆ