ಬಹಳ ಪುರಾತನ ಕಾಲದಿಂದಲೂ ಮಾನವನ ರಕ್ಷಣೆ ಮತ್ತು ವೈರಿ ನಿರ್ಮಾಣಕ್ಕೆ ಉತ್ತರಣೆ ಸಸ್ಯವನ್ನು ಬೆಳೆಯಲಾಗುತ್ತಿತ್ತು. ಹಿಂದೆ ಇದಕ್ಕೆ ತುಳಸಿಯಷ್ಟೇ ಮಹತ್ವವಿತ್ತು. ಕಾರಣಾಂತರಗಳಿಂದ ಒಂದು ಉತ್ತರಣೆ ಉಪಯೋಗ ಅಷ್ಟಾಗಿ ಕಂಡುಬರುವುದಿಲ್ಲ. ದೇಶದ ಎಲ್ಲಾ ಕಡೆಗೂ ಬೀಳು ಭೂಮಿಯಲ್ಲಿ ಬೆಳೆಯುವ ವಾರ್ಷಿಕ ಕಸ. ಗುಂಡನೆ ಎಲೆ, ಹರಿವೆ ಎಲೆ ಆಕಾರ. ಅದೇ ಕುಲ, ತುದಿ ರಂಬೆಯಲ್ಲಿ ಉದ್ದನೆಯ ಹೂ ಗೊಂಚಲು, ಕಿರಿಯ ಹೂ, ಅನಂತರ ಮುಳ್ಳು ಮೊನಚಿನ ಕವಚದ ಗುಂಡನೆ ಕಿರಿಬೀಜ. ಬೀಜದಿಂದ ಹೊಸ ಸಸ್ಯ ಹುಟ್ಟು, ಗಿಡದ ಬದಿಯಿಂದ ಹಾದು ಹೋದರೆ ಸಾಕು ಬೀಜಗಳು ಬಟ್ಟೆಗೆ ಸಾಲು ಸಾಲು ಅಂಟಿಕೊಳ್ಳುತ್ತದೆ.
ಉಪಯೋಗಗಳು :-
*ಕೈಕಾಲು ಉರಿ, ಬಾವು, ನೋವಿನ ಪರಿಹಾರಕ್ಕೆ ಒಣ ಚೂರ್ಣದ ಸಂಗಡ ಜೇನು ಸೇರಿಸಿ ನೆಕ್ಕಿದರೆ ಕೈಕಾಲೂ ಉರಿ, ಬಾವು ನೋವಿನಲ್ಲಿ ಪರಿಹಾರವಾಗುತ್ತದೆ.
*ಉತ್ತರಣೆಯ ಬೀಜವನ್ನು ಅರೆದು ಹಚ್ಚಿದರೆ ಮೂಲವ್ಯಾಧಿಯನ್ನು ಮತ್ತು ಬಾವು ಕಡಿಮೆಯಾಗುತ್ತದೆ.
*ಹಳೆಯ ಕೆಮ್ಮು, ಕಫ, ನೆಗಡಿ ಪರಿಹಾರಕ್ಕೆ ಉತ್ತರಣೆಯ ಎಲೆಯ ರಸವನ್ನು ಸೇವಿಸಿರಿ.
* ಬೇರು ಅರೆದು, ಅಕ್ಕಿ ತೊಳೆದ ನೀರಿನ ಜೊತೆ ಕುಡಿದರೆ ಮೂಲವ್ಯಾಧಿಯ ರಕ್ತಸ್ರಾವ ಕಡಿಮೆಯಾಗುತ್ತದೆ.
* ಮೂತ್ರ ಉರಿ, ಮೂತ್ರಕಟ್ಟು ಪರಿಹಾರಕ್ಕೆ ಒಣ ಸಸ್ಯ ಸುಟ್ಟು ಬೂದಿ ಮಾಡಿ, ಕದಡಿ ಕುಡಿಯಬೇಕು. ಮೂತ್ರದ ಆಮ್ಲೀಯತೆಗೆ ಇದು ರಾಮಬಾಣವಾಗಿದೆ. ಮೂತ್ರದಲ್ಲಿರುವ ಕಲ್ಲುಗಳು ಸಹ ಕರಗುತ್ತದೆ.
* ಚರ್ಮರೋಗ ಪರಿಹಾರಕ್ಕೆ ಅರೆದ ಎಲೆಯ ಲೇಪನವನ್ನು ಮಾಡಬೇಕು. ಸಸ್ಯದ ಕಷಾಯ ಕುಡಿದರೆ ಬಹಳ ಹಿತಕಾರಿ.
* ಮೂಗಿನ ದುರ್ಮಾಂಸ, ಸೋರುವಿಗೆ, ಕಟ್ಟುವಿಕೆ, ಪರಿಹಾರಕ್ಕೆ ಬೇರಿನ ಒಣ ಪುಡಿಯ ಅಥವಾ ಬೀಜದ ಪುಡಿಯನ್ನು ಸಸ್ಯದ ಪುಡಿಯಂತೆ ಮೂಗಿಗೆ ಹಾಕಿ ಸೀನು ಬರಿಸಿದರೆ ಬಹಳ ಹಿತಕಾರಿ.