ಮನೆ ಅಪರಾಧ ಆ್ಯಸಿಡ್ ದಾಳಿ ಪ್ರಕರಣ: ಆರೋಪಿ 1.50 ಲಕ್ಷ ರೂ. ಸಮೇತ ಪರಾರಿ

ಆ್ಯಸಿಡ್ ದಾಳಿ ಪ್ರಕರಣ: ಆರೋಪಿ 1.50 ಲಕ್ಷ ರೂ. ಸಮೇತ ಪರಾರಿ

0

ಬೆಂಗಳೂರು-ಯುವತಿ ಮೇಲೆ ಆ್ಯಸಿಡ್ ದಾಳಿ ನಡೆಸಿದ್ದ ಆರೋಪಿ ನಾಗರಾಜ್ 1.50 ಲಕ್ಷ ರೂ. ಸಮೇತ ಪರಾರಿಯಾಗಿರುವುದು ತನಿಖೆಯಿಂದ ತಿಳಿದುಬಂದಿದೆ.

ಆರೋಪಿ ನಾಗರಾಜ್ ಪೊಲೀಸರ ಕಣ್ತಪ್ಪಿಸಿ ಓಡಾಡುತ್ತಿದ್ದಾನೆ. ಆತನ ಬಂಧನಕ್ಕೆ ವಿಶೇಷ ತಂಡಗಳು ತನಿಖೆ ಮುಂದುವರಿಸಿವೆ. ಆರೋಪಿಯ ಪೋಷಕರು, ಸ್ನೇಹಿತರು, ವ್ಯಾಪಾರದ ಪಾಲುದಾರರು ಹಾಗೂ ಇತರಿಂದಲೂ ಪೊಲೀಸರು ಮಾಹಿತಿ ಪಡೆಯುತ್ತಿದ್ದಾರೆ.

ಆ್ಯಸಿಡ್ ದಾಳಿಗೂ ಮುನ್ನ ಆತ ವ್ಯವಸ್ಥಿತ ಸಂಚು ರೂಪಿಸಿದ್ದ. ದಾಳಿ ಬಳಿಕ ಪೊಲೀಸರು ತನ್ನನ್ನು ಬಂಧಿಸಬಹುದೆಂದು ತಿಳಿದು, ಪರಾರಿಯಾಗಲು ಮೊದಲೇ ಯೋಚಿಸಿದ್ದ. ಅದಕ್ಕಾಗಿ 1.50 ಲಕ್ಷ ರೂ. ‌ಸಿದ್ಧಪಡಿಸಿಕೊಂಡಿದ್ದ. ಕೃತ್ಯದ ನಂತರ ಅದೇ ನಗದು ಸಮೇತ ಆರೋಪಿ ಪರಾರಿಯಾಗಿದ್ದಾನೆ ಎಂದು ಪೊಲೀಸ್ ಮೂಲಗಳು ಹೇಳಿವೆ.

ಆರೋಪಿ ಮೊಬೈಲ್ ಬಳಸುತ್ತಿಲ್ಲ. ಹೀಗಾಗಿ, ಆತನ ವಿಳಾಸದ ಬಗ್ಗೆ ಸುಳಿವು ಸಿಗುತ್ತಿಲ್ಲ. ಆದರೆ, ಆತ ತಮಿಳುನಾಡು ಹಾಗೂ ಆಂಧ್ರಪ್ರದೇಶದಲ್ಲಿರುವ ಮಾಹಿತಿ ಇದೆ. ತಂಡಗಳನ್ನು ಕಳುಹಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಕಾಮಾಕ್ಷಿಪಾಳ್ಯ ಠಾಣೆ ವ್ಯಾಪ್ತಿಯಲ್ಲಿ ಏಪ್ರಿಲ್ 28ರಂದು ನಡೆದ ಘಟನೆಯಲ್ಲಿ ಗಾಯಗೊಂಡಿರುವ ಯುವತಿ ಸೇಂಟ್ ಜಾನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆರೋಗ್ಯದಲ್ಲಿ ಚೇತರಿಕೆ ಕಂಡುಬರುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಹಿಂದಿನ ಲೇಖನಮೇ 3ಕ್ಕೆ ರಂಜಾನ್‌ ಆಚರಣೆ: ಕೇಂದ್ರೀಯ ಚಂದ್ರದರ್ಶನ ಸಮಿತಿ
ಮುಂದಿನ ಲೇಖನಪಿಎಸ್‌ ಐ ನೇಮಕಾತಿ ಅಕ್ರಮ: ಪ್ರಮುಖ ಆರೋಪಿ ಮಂಜುನಾಥ ಮೇಳಕುಂದಿ ಪೊಲೀಸರಿಗೆ ಶರಣು